ದುಬೈ ಕನ್ನಡಿಗರ ಭಾಷಾಭಿಮಾನಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

FB IMG 1766927822479 ದುಬೈ ಕನ್ನಡಿಗರ ಭಾಷಾಭಿಮಾನಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ
Spread the love

  ಮುಂದಿನ ಪೀಳಿಗೆ ಮಾತೃಭಾಷೆಯಿಂದ ದೂರವಾಗಬಾರದು ಎಂಬ ದುಬೈ ಕನ್ನಡಿಗರ ಹಂಬಲ ಇದೀಗ ದೇಶದ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 129ನೇ ‘ಮನ್ ಕೀ ಬಾತ್’ ರೇಡಿಯೋ ಭಾಷಣದಲ್ಲಿ ಅನಿವಾಸಿ ಕನ್ನಡಿಗರ ಈ ಮಹತ್ಕಾರ್ಯವನ್ನು ವಿಶೇಷವಾಗಿ ಪ್ರಸ್ತಾಪಿಸಿ ಶ್ಲಾಘಿಸಿದ್ದಾರೆ.

   ದುಬೈನಲ್ಲಿ ನೆಲೆಸಿರುವ ಸಾವಿರಾರು ಕನ್ನಡಿಗರು ತಮ್ಮ ಮಕ್ಕಳು ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಬೆಳೆಯುತ್ತಿರುವಾಗ, ತಮ್ಮ ಮೂಲ ಸಂಸ್ಕೃತಿ ಮತ್ತು ಕನ್ನಡ ಭಾಷೆಯಿಂದ ವಂಚಿತರಾಗುತ್ತಿದ್ದಾರೆ ಎಂಬ ಆತಂಕಕ್ಕೆ ಒಳಗಾಗಿದ್ದರು. ಈ ಆತಂಕವೇ ಒಂದು ಸುಂದರ ಅಭಿಯಾನಕ್ಕೆ ನಾಂದಿ ಹಾಡಿತು.

  ತಮ್ಮ ಮಕ್ಕಳಿಗೆ ಕನ್ನಡ ಕಲಿಸಲೇಬೇಕು ಎಂಬ ದೃಢ ಸಂಕಲ್ಪ ಮಾಡಿದ ಅಲ್ಲಿನ ಕನ್ನಡಿಗರು, ದುಬೈನಲ್ಲಿಯೇ ‘ಕನ್ನಡ ಪಾಠಶಾಲೆ’ಯನ್ನು ಆರಂಭಿಸಿದರು. ಈ ಮೂಲಕ ವಿದೇಶಿ ಮಣ್ಣಿನಲ್ಲೂ ಕನ್ನಡದ ದೀಪವನ್ನು ಹಚ್ಚಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಧಾನಿ, “ದುಬೈ ಕನ್ನಡಿಗರು ತಮ್ಮ ಮಕ್ಕಳು ಕನ್ನಡದಿಂದ ದೂರವಾಗುತ್ತಿದ್ದಾರೆ ಎಂದು ಅರಿತ ತಕ್ಷಣವೇ ಎಚ್ಚೆತ್ತುಕೊಂಡು ಪಾಠಶಾಲೆ ಆರಂಭಿಸಿದ್ದು ನಿಜಕ್ಕೂ ಮಾದರಿ” ಎಂದು ಗುಣಗಾನ ಮಾಡಿದರು.

  ಪ್ರಧಾನಿಯವರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ಕುರಿತಾದ ವಿಡಿಯೋವನ್ನು ಹಂಚಿಕೊಂಡಿದ್ದು, ಕನ್ನಡಿಗರ ಭಾಷಾಭಿಮಾನಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಂತಾಗಿದೆ.


Spread the love

Leave a Reply

Your email address will not be published. Required fields are marked *