ಹೊಸನಗರ : ಪಟ್ಟಣದ ಶ್ರೀ ವೀರಶೈವ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹೆಚ್. ಪಿ. ನಂಜುಂಡಪ್ಪ ಹಾಗೂ ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೀತಾ ಗಿರೀಶ್ ಸೇರಿ ಸಂಘದಲ್ಲಿ ಅವ್ಯವಹಾರ ನಡೆಸಿದ್ದಾರೆ. ಸದಸ್ಯರ ಷೇರು ಹಣ, ಠೇವಣಿ ಹಣ, ಸಾಲ ಯೋಜನೆಯಲ್ಲಿ ವಂಚನೆ ನಡೆಸಿದ್ದು ನಕಲಿ ಖಾತೆ ಸೃಷ್ಟಿ, ಅಕ್ರಮ ಹಣ ವರ್ಗಾವಣೆ, ಸಂಘದ ಹಣ ದುರ್ಬಳಕೆ ಮಾಡಿ ಬಹುಕೋಟಿ ಹಣ ಲೂಟಿ ಮಾಡಲಾಗಿದೆ. ಈ ಬಹುಕೋಟಿ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಸಂಘದ ಅಧ್ಯಕ್ಷ ವರಕೋಡು ಈಶ್ವರಪ್ಪ ಗೌಡ ತಿಳಿಸಿದರು.
ಪಟ್ಟಣದ ಶ್ರೀ ವೀರಶೈವ ಪತ್ತಿನ ಸಹಕಾರ ಸಂಘದಲ್ಲಿ ಹೆಚ್. ಪಿ ನಂಜುಂಡಪ್ಪ ಹದಿನೆಂಟು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಈ ವೇಳೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಗೀತಾ ಗಿರೀಶ್ ಸೇರಿ ಸಂಘದಲ್ಲಿ ಹಲವಷ್ಟು ಅವ್ಯವಹಾರ ನಡೆಸಿದ್ದಾರೆ. ಸಂಘಕ್ಕೆ ಬರುತ್ತಿದ್ದ ಪಿಗ್ನಿ ಹಣ, ಜಾಮೀನು ಸಾಲದಲ್ಲಿ ವಂಚನೆ, ಶಿವವಿಕಾಸ ಪತ್ರದಲ್ಲಿ ವಂಚನೆ, ಖಾಯಂ ಠೇವಣಿಯಲ್ಲಿ ನಕಲಿ ಬಾಂಡ್ ವಿತರಣೆ ಹಾಗೂ ರಶೀದಿ ಪುಸ್ತಕದಲ್ಲಿ ವಂಚನೆ, ಸಂಘದ ಹಣ ಬಳಕೆ ಮಾಡಿ ಮೀಟರ್ ಬಡ್ಡಿ ವ್ಯವಹಾರ ನಡೆಸಿ ಸಂಘದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಈ ವರೆಗೆ ಕೊಟ್ಯಾಂತರ ರೂಪಾಯಿಗಳ ವ್ಯವಹಾರ ಸಂಘದಲ್ಲಿ ನಡೆದಿದ್ದರೂ ಸಹಾ ಸಂಘ ನಷ್ಟದಲ್ಲಿದೆ. ಸಂಘದ ಆದಾಯದಲ್ಲಿ ನಷ್ಟವನ್ನು ತೋರಿಸಿ ಭಾರಿ ಪ್ರಮಣದ ಹಗರಣ ಮಾಡಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ವ್ಯವಹಾರಗಳ ಬಗ್ಗೆ ಷೇರುದಾರರಿಂದ ದೂರು ಬಂದ ಸಂದರ್ಭದಲ್ಲಿ ಅಧ್ಯಕ್ಷ ನಂಜುಂಡಪ್ಪ ಅವರನ್ನು ಕೆಳಗಿಳಿಸಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ಆಡಳಿತ ಮಂಡಳಿ ಸಂಘದ ಚಟುವಟಿಕೆ ಗಮನಿಸಿದಾಗ ಹಲವಷ್ಟು ಅಕ್ರಮ, ಅವ್ಯವಹಾರ ಬೆಳಕಿಗೆ ಬಂದಿದೆ. ತಕ್ಷಣ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೀತಾ ಗಿರೀಶ್ ಅವರನ್ನು ಅಮಾನತು ಮಾಡಲಾಗಿದೆ. ಸಂಘದ ಆರ್ಥಿಕ ವಹಿವಾಟು ಕುರಿತು ಸಮಗ್ರ ತನಿಖೆಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗಿದೆ. ಸಹಕಾರಿ ಇಲಾಖೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಚ್. ಬಸಪ್ಪ ಬೆಳಂದೂರು, ಶಿವಾನಂದ ಮಾವಿನಕಟ್ಟೆ, ಎಚ್. ಮಲ್ಲಿಕ ಜಬಗೋಡು, ಯೋಗೇಶ ಕುಮಾರ್ ಇದ್ದರು.













Leave a Reply