ಫೆ. 17 ಒಂದು ದಿನದ ಕಾಳು ಮೆಣಸು- ಸಾಂಬಾರು ಉತ್ಪನ್ನ; ಮೌಲ್ಯವರ್ಧನೆ ತರಬೇತಿ

ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 ಫೆ. 17 ಒಂದು ದಿನದ ಕಾಳು ಮೆಣಸು- ಸಾಂಬಾರು ಉತ್ಪನ್ನ; ಮೌಲ್ಯವರ್ಧನೆ ತರಬೇತಿ
Spread the love

ಶಿವಮೊಗ್ಗ: ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮನಿಯಮಿತ (ಕೆಪೆಕ್) ಸಂಸ್ಥೆ, ಜಿಲ್ಲಾ ಪಂಚಾಯಿತಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಫೆ.17 ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಚಿಕ್ಕಮಗಳೂರಿನ ಜಿ.ಪಂ ಸಭಾಂಗಣದಲ್ಲಿ ‘ಕಾಳು ಮೆಣಸು ಮತ್ತಿತರೆ ಸಾಂಬಾರು ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ರಫ್ತು’ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.

ಸಾಂಬಾರು ಬೆಳೆಗಳ ವಿಷಯ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ತರಬೇತಿ ನೀಡುವರು. ಸಾಂಬಾರು ಬೆಳೆಗಾರರು, ರೈತ ಉತ್ಪಾದಕ ಸಂಸ್ಥೆಗಳು, ಸಾಂಬಾರು ಉತ್ಪನ್ನಗಳ ಉದ್ದಿಮೆದಾರರಿಗೆ ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love

Leave a Reply

Your email address will not be published. Required fields are marked *