ನಗರ : ನಗರದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ, ಭರದಲ್ಲಿ ಸಿದ್ಧತೆ ನಡೆಯುತ್ತಿದೆ. ನಗರ, ಕರಿಮನೆ, ಅಂಡಗದೋದೂರು ಈ ಮೂರು ಪಂಚಾಯಿತಿಗಳು ಸೇರಿಸಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮವನ್ನು ಹಿಂದೂ ಆಯೋಜನ ಸಮಿತಿ ವತಿಯಿಂದ ಆಯೋಜಿಸಲಾಗಿದೆ.
ನಾಳೆ ಫೆಬ್ರವರಿ 8, ಭಾನುವಾರ ದಂದು ಮಧ್ಯಾಹ್ನ 3:30 ರಿಂದ ಶ್ರೀ ನೀಲಕಂಠೇಶ್ವರ ದೇವಸ್ಥಾನ ದಿಂದ ವೇದಿಕೆವರೆಗೆ ಶೋಭಯಾತ್ರೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ನವೀನ್ ಸುಬ್ರಮಣ್ಯ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಭರತನಾಟ್ಯ, ಭಜನೆ, ಕಂಸಾಳೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಸದ್ಭಕ್ತ ಹಿಂದೂ ಕುಲಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಿಂದೂ ಸಂಗಮ ಆಯೋಜನ ಸಮಿತಿಯ ವತಿಯಿಂದ ಕೋರಲಾಗಿದೆ.








Leave a Reply