ನಾಳೆ ಕೊಳವಂಕ ಜಾತ್ರೋತ್ಸವ – ಸಕಲಸಿದ್ಧತೆ

ನಾಡಿ ನ್ಯೂಸ್ 20251218 115242 0000 ನಾಳೆ ಕೊಳವಂಕ ಜಾತ್ರೋತ್ಸವ - ಸಕಲಸಿದ್ಧತೆ
Spread the love

ನಾಡಿ ನ್ಯೂಸ್
ರಿಪ್ಪನ್ ಪೇಟೆ ಸುದ್ದಿ:

ಹಾರೋಹಿತ್ಲು: ಗ್ರಾಮದ ಶ್ರೀ ಬಸವೇಶ್ವರ ಮತ್ತು ಶ್ರೀ ಯಕ್ಷಮ್ಮದೇವಿ ದೇವಸ್ಥಾನ ಸನ್ನಿಧಿಯಲ್ಲಿ ಶುಕ್ರವಾರ ಎಳ್ಳಮಾವಾಸ್ಯೆಯಂದು ಬೆ.7-30ಕ್ಕೆ ಪಂಚಾಮೃತಾಭಿಷೇಕ ಮತ್ತು ಗ್ರಾಮಸ್ಥ ರಿಂದ ಸೇವಾ ಸಂಕಲ್ಪ ತದನಂತರ ಸುಡಗಿ ಜಾತ್ರೋತ್ಸವ ಏರ್ಪಡಿಸಲಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಹಾರೋಹಿತ್ಲು, ಮಜರೆ ಗ್ರಾಮ ಕೊಳವಂಕ ಗ್ರಾಮಸ್ಥರು ವಿಜೃಂಭಣೆಯಿಂದ ಈ ಜಾತ್ರೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬಂದಿರುತ್ತಾರೆ.ಈ ಜಾತ್ರೆಗೆ ಊರಿನ ಎಲ್ಲಾ ಗ್ರಾಮಸ್ಥರು ಯಾವುದೇ ಪರ‌ ಊರಿನಲ್ಲಿದ್ದರು ಈ ಜಾತ್ರೆಯಲ್ಲಿ ಊರಿಗೆ ಬಂದು ಭಾಗವಹಿಸುತ್ತಾರೆ.ಈ ಬಾರಿಯ ಜಾತ್ರೆ 60ನೇ ವರ್ಷದ್ದು ಅನ್ನುವುದು ವಿಶೇಷ ಏಕೆಂದರೆ ದೇವಸ್ಥಾನದ ಸಮಿತಿಯು ಸುಧೀರ್ಘವಾಗಿ 60 ವರ್ಷಗಳ ಕಾಲ ಈ ಜಾತ್ರೋತ್ಸವಕ್ಕಾಗಿ ಎಲ್ಲರನ್ನು ಒಗ್ಗೂಡಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಜಾತ್ರಾ ಉತ್ಸವ ಸಮಿತಿ ಪದಾಧಿಕಾರಿಗಳು
ಅಧ್ಯಕ್ಷರು ಯೋಗೇಂದ್ರ ನಾಯ್ಕ,ಗೌರವಾಧ್ಯಕ್ಷರು ನಾರಾಯಣಪ್ಪ,
ಕಾರ್ಯದರ್ಶಿ ರಾಮಚಂದ್ರ ಕೆ.ಇ,ಸಹ ಕಾರ್ಯದರ್ಶಿ ವಾಸುದೇವ,ಖಜಾಂಚಿ ಉಮಾಕಾಂತ ,ಉತ್ತಮಪ್ರಸಾದ್,ಸದಸ್ಯರಾದನೋಮಿರಾಜ್,ನರಹರಿ,ಲೋಕೇಶ್,ಕೃಷ್ಣಮೂರ್ತಿಕೆ.ಬಿ,ಗಿರೀಶ್,ದೀಪಕ್,ದ್ವಾರಕೀಶ್,ಕೇಶವ,ರಾಜೇಶ್,ಮಂಜಪ್ಪ,ಅವಿನಾಶ,ಪ್ರದೀಪ,ರಾಘವೇಂದ್ರ,ಕೃಷ್ಣಮೂರ್ತಿ,ಕಿರಣ,ವೆಂಕಟೇಶ,ಸುಧಾಕರ,ನವೀನ್,ಶ್ರೀಧರ ಮತ್ತು ಅರ್ಚಕರಾದ ಯೋಗೇಂದ್ರಪ್ಪ ಗೌಡ್ರು ಇವರ ಸಾರಥ್ಯದಲ್ಲಿ ಜಾತ್ರೋತ್ಸವ ಕಾರ್ಯಕ್ರಮ ನಡೆಲಿದೆ.

ನಾಳೆ ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆಯು ಇರಲಿದೆ. ಅದೇ ದಿನ ಸಂಜೆ 7-00 ಗಂಟೆಗೆ ಶ್ರೀ ಬಸವೇಶ್ವರ ಮತ್ತು ಶ್ರೀ ಯಕ್ಷಮ್ಮದೇವಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.

ಮನರಂಜನೆ ಕಾರ್ಯಕ್ರಮ

ರಾತ್ರಿ 9-30 ಕ್ಕೆ ಶ್ರೀ ಕುಮಾರ ರಾಮೇಶ್ವರ ಡ್ರಾಮಾ ಸೀನ್ಸ್ ಉಮಟೇಗದ್ದೆ ಇವರಿಂದ ಶ್ರೀ ರಮೇಶ್ ಹೆಚ್ ಬಡಿಗೇರ ವಿರಚಿತ ಹಳ್ಳಿ ಹುಲಿಕೊಟ್ಟ ಬೆಳ್ಳಿ ಕಾಲುಂಗುರ ಅರ್ಥಾತ್ ರೈತನ ಕಣ್ಣೀರಿಗೆ ಆಸರೆ ಯಾರು ?ಎಂಬ ಸುಂದರ ಸಾಮಾಜಿಕ ನಾಟಕವನ್ನು ಏರ್ಪಡಿಸಲಾಗಿದೆ.

ಗ್ರಾಮಸ್ಥರೆಲ್ಲ ಸೇರಿ ಈ ಜಾತ್ರೋತ್ಸವವನ್ನು ಚೆಂದಗಾಣಿಸಬೇಕೆಂದು ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ಬಸವೇಶ್ವರ ಮತ್ತು ಯಕ್ಷಮ್ಮದೇವಿ ಉತ್ಸವ ಸಮಿತಿ ಮತ್ತು ಸೇವಾ ಸಮಿತಿಯ ವತಿಯಿಂದ ವಿನಂತಿಸಲಾಗಿದೆ.


Spread the love

Leave a Reply

Your email address will not be published. Required fields are marked *