ಮಲೆನಾಡಿನಲ್ಲಿಯೇ ಪ್ರಪ್ರಥಮ ಶ್ರೀ ಗಂಗಾರತಿ

ಮಲೆನಾಡಿನಲ್ಲಿಯೇ ಪ್ರಪ್ರಥಮ ಬಾರಿಗೆ 20251218 192200 0000 3 ಮಲೆನಾಡಿನಲ್ಲಿಯೇ ಪ್ರಪ್ರಥಮ ಶ್ರೀ ಗಂಗಾರತಿ
Spread the love

ಬಿದನೂರು ನಗರ:ದೇವಗಂಗೆ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಎಳ್ಳಮವಾಸ್ಯೆ ಜಾತ್ರಾ ಮಹೋತ್ಸವದ ನಿಮಿತ್ತ ನಾಳೆ ಸಂಜೆ 5-30 ರಿಂದ ಗಂಗಾರತಿಯನ್ನು ಆಯೋಜಿಸಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ಗುರುತಿಸಿಕೊಳ್ಳಲಿದೆ.

ಇತಿಹಾಸ ಪ್ರಸಿದ್ಧ ದೇವಗಂಗೆ ಪ್ರೇಕ್ಷಣೀಯ ಸ್ಥಳವಾಗಿ ಅಲ್ಲದೇ ಧಾರ್ಮಿಕ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದುವತ್ತ ದಾಪುಗಾಲಿಟ್ಟಿದೆ.

ಕ್ಷೇತ್ರದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಈ ಬಾರಿ ಧಾರ್ಮಿಕ ಕಾರ್ಯಕ್ರಮಗಳನ್ನು ಗ್ರಾಮಸ್ಥರು ಮತ್ತು ದೇವಸ್ಥಾನ ಸಮಿತಿ ಆಯೋಜಿಸಿದೆ.

ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ

ಬೆಳಿಗ್ಗೆ 3-00 ಗಂಟೆಯಿಂದ ದೇವಗಂಗೆಯಲ್ಲಿ ಪವಿತ್ರ ಸ್ನಾನ.
ಬೆಳಿಗ್ಗೆ 8-30ಕ್ಕೆ ವಿಶೇಷ ಪೂಜೆ,ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ,ಮಧ್ಯಾಹ್ನ 1 ಅನ್ನ ಸಂತರ್ಪಣೆ ಇರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ

ಸಂಜೆ 7 ರಿಂದ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಶಿರಿಯಾರ ಇವರಿಂದ ” ರಾಜಾ ರುದ್ರಕೋಪ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ” ವೂ ಇರಲಿದೆ.

ವಿಶೇಷವಾಗಿ ಬಿದನೂರು ಗೆಳೆಯರ ಬಳಗದ ವತಿಯಿಂದ ಕಣ್ಣುಕೋರೈಸುವ ವಿದ್ಯುತ್ ಬೆಳಕಿನ ದೃಶ್ಯ ವೈಭವವೂ ಇರಲಿದೆ.

ಈ ಐತಿಹಾಸಿಕ ಸ್ಥಾನದಲ್ಲಿರುವ ಶ್ರೀಗಂಗಾಧರೇಶ್ವರ ದೇವರ ಕೃಪೆಗೆ ಪಾತ್ರರಾಗುವಂತೆ ಸಮಸ್ತ ಗ್ರಾಮಸ್ಥರು,ದೇವಗಂಗೆ ,ಇಂದ್ರೋಡಿ ,ಬಸವನಬ್ಯಾಣ ,ಶ್ರೀಧರಪುರ,ಬಿದನೂರು,ನಗರ ಹೋಬಳಿ ಮತ್ತು ದೇವಗಂಗೆ ಶ್ರೀ ಗಂಗಾಧರೇಶ್ವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ವಿನಂತಿಸಲಾಗಿದೆ.


Spread the love

Leave a Reply

Your email address will not be published. Required fields are marked *