ಶಾಸಕಿ ಶಾರದಾಪುರ್ಯ ನಾಯ್ಕ್ ಅವರಿಗೆ ಜನ ಮೆಚ್ಚುಗೆ
ಆಯನೂರು :ರಾಜ್ಯ ಹೆದ್ದಾರಿಯಂತಹ ವಾಹನ ಸಂಚಾರ ಇರುವ ಮಾರ್ಗದಲ್ಲಿ ಕತ್ತರಿಸಿದ ಮರದ ದೊಡ್ಡ ಮುಂಡನ್ನು ಯಾವುದೇ ಎಚ್ಚರಿಕೆ ಫಲಕ, ಪ್ರತಿಬಿಂಬಕ (ರಿಫ್ಲೆಕ್ಟರ್) ಅಥವಾ ಸುರಕ್ಷತಾ ವ್ಯವಸ್ಥೆಯಿಲ್ಲದೆ ಹಾಗೆಯೇ ಬಿಟ್ಟಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿಯಾಗಿತ್ತು. ರಾತ್ರಿ ವೇಳೆಯಲ್ಲಿ ಈ ಮರದ ಮುಂಡು ವಾಹನ ಸವಾರರಿಗೆ ಕಾಣಿಸದ ಕಾರಣ ಅದು ಯಮ ಸ್ವರೂಪಿಯಾಗಿ ಎದುರಾಗುತ್ತಿರುವುದನ್ನು ನಾಡಿನ್ಯೂಸ್ ವರದಿ ಮಾಡಿತ್ತು.

ಕಾಡ್ಗಿಚ್ಚಿನಂತೆ ಹಬ್ಬಿದ್ದ ಈ ವರದಿಯು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಪೂರ್ಯ ನಾಯ್ಕ್ ಅವರಿಗೆ ತಿಳಿಯುತ್ತಿದ್ದಂತೆ ಮರದ ಮುಂಡನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಅಧಿಕಾರಿಗಳಿಗೆ ಸೂಚಿಸಿದರು.
ರಾತ್ರೋರಾತ್ರಿ ಎಚ್ಚೆತ್ತ ಅಧಿಕಾರಿ ವರ್ಗ ಅಪಘಾತ ವಲಯವಾಗಿ ಬದಲಾಗಿದ್ದ ಯಮಸ್ವರೂಪಿ ಮರದ ಮುಂಡನ್ನು ತೆರವುಗೊಳಿಸಿದರು.
ಶಾಸಕಿ ಶಾರದಪುರ್ಯ ನಾಯ್ಕ್ ಅವರು ಸಾರ್ವಜನಿಕರ ಸಮಸ್ಯೆ ತಕ್ಷಣ ಸ್ಪಂದಿಸಿದ್ದು ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.














Leave a Reply