ವರದಿ:ಆದರ್ಶ ಮೂಗುಡ್ತಿ
ಮೂಗುಡ್ತಿ: ಇಲ್ಲಿನ ಪ್ರಸಿದ್ಧ ಬಲಮುರಿ ಮಹಾಗಣಪತಿ ದೇವಸ್ಥಾನ ಹಾಗೂ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮಹಾ ರಥೋತ್ಸವ ಕಾರ್ಯಕ್ರಮವು ಜನವರಿ 13 ರಿಂದ 16 ರ ತನಕ ಶ್ರೀ ದೇವರ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. 14 ರಂದು ಮಹಾ ರಥೋತ್ಸವ ಕಾರ್ಯಕ್ರಮ ದಂದು ಸಾವಿರಾರು ಭಕ್ತರು ಭಾಗವಹಿಸಿದ್ದರು.ಓಕುಳಿ,ಪಲ್ಲಕ್ಕಿ ಉತ್ಸವವು ನಡೆಯಿತು. ಸತ್ಯನಾರಾಯಣ ಪೂಜೆ, ಹವನ ,ಭಜನ ಕಾರ್ಯಕ್ರಮ , ಯಕ್ಷಗಾನ , ಎಲ್ಲಾ ಧಾರ್ಮಿಕ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಇಂದು (ಜ.16)ಪಂಚಗವ್ಯ ಹವನ, ಪ್ರಸಾದ ವಿನಿಯೋಗದ ನಂತರ ಮಹಾ ರಥೋತ್ಸವ ಕಾರ್ಯಕ್ರಮವು ಸಂಪನ್ನಗೊಂಡಿತು.

ಈ ಸಂಧರ್ಭದಲ್ಲಿ ಅಧ್ಯಕ್ಷರು ಗುರುರಾಜ್ ಗೌಡ್ರು,ವಿಶುಕುಮಾರ್, ಸುಭಾಷ್ ಚಂದ್ರ ಎಂ ಆರ್, ಮಹಾಬಲ,ರುದ್ರಪ್ಪ ಗೌಡ್ರು, ಚೂಡಾಮಣಿ ಜಿ.ಎಂ , ಚಂದ್ರುಶೇಖರ್ ಎಂ. ಆರ್,ಸಂದೇಶ ಎಂ ಎನ್, ಸಚಿನ್ ಎ ಎಸ್, ವಿಶ್ವನಾಥ, ನಾಗಭೂಷಣ ಎಂ ಆರ್,

ಗೋವರ್ಧನ್ ಎಂ.ಎಂ, ಬಸವರಾಜ್ ಎಂ ವಿ, ಮಹೇಶ್ ಎಂ ಎಸ್, ರವಿ ಜಿ.ಎಸ್, ರಾಘವೇಂದ್ರ ಎಂ.ಎಂ, ಪ್ರವೀಣ್ ಪಿ. ಎಸ್, ಅರುಣ್ ಕುಮಾರ್ ಡಿ, ಕಾರ್ತಿಕ್ ಎಂ. ಜೆ,ಗಣೇಶ್,ಅಶ್ವಥ್, ಜನಾರ್ಧನ್, ಪವನ್ ಎಂ.ಸಿ, ನಿತಿನ್ ಗೌಡ, ಯತೀಶ್ ಎಂ ಎಸ್, ಅನಿಲ್ ಕುಮಾರ್ ಎಂ ಆರ್, ಮತ್ತಿತರರು ಉಪಸ್ಥಿತರಿದ್ದರು.
















Leave a Reply