ವಿವಿಧ ಧಾರ್ಮಿಕ ಕಾರ್ಯಕ್ರಮ – ಅಲಸೆ ಮೇಳ ದಿಂದ ಯಕ್ಷಗಾನ
ಮೂಗುಡ್ತಿ: ಮುಗುಡ್ತಿ ಪ್ರಸಿದ್ಧ ಬಲಮುರಿ ಮಹಾಗಣಪತಿ ದೇವಸ್ಥಾನ ಹಾಗೂ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮಹಾ ರಥೋತ್ಸವ ಕಾರ್ಯಕ್ರಮವು ಜ.13 ರಿಂದ 16 ರವರೆಗೆ ನಡೆಯಲಿದೆ.

ವಿವಿಧ ಧಾರ್ಮಿಕ ಕಾರ್ಯಕ್ರಮ
ದಿನಾಂಕ 13-01-2023ನೇ ಮಂಗಳವಾರದಂದು ಬೆಳಿಗ್ಗೆ 10.00 ಗಂಟೆಗೆ ಗುರುಗಣಪತಿ ಪ್ರಾರ್ಥನೆ, ಪುಣ್ಯಾಹ, ದೇವನಾಂದಿ, ಧ್ವಜಾರೋಹಣ, ಪ್ರಸಾದ ವಿನಿಯೋಗ
ಸಂಜೆ 6.00 ಕ್ಕೆ ಯಾಗಶಾಲಾ ಪ್ರವೇಶ, ಅಂಕುರಾರ್ಪಣ, ಅಧಿವಾಸ ಹೋಮ, ಕೇತುಕಾ ಬಂಧನ, ಭೇರಿ ತಾಡನ, ಮಹಾಬಲಿ ಪ್ರಾರಂಭ ಭೂತ ಬಲಿ, ಅಷ್ಟಾವಧಾನ ಸೇವೆ.
ದಿನಾಂಕ 14-01-2026ನೇ ಬುಧವಾರದಂದು ಬೆಳಗ್ಗೆ 7.00 ಗಂಟೆಗೆ ಗಣಪತಿ ಪೂಜೆ, ಪುಣ್ಯಾಹ, ಉದಯ ಬಲಿ,ಅಧಿವಾಸ ಹೋಮ,ಮಧ್ಯಾಹ್ನ 12:30 ರಿಂದ 1-00ರವರೆಗೆ
ಮಹಾ ರಥೋತ್ಸವ
ಸಾಮೂಹಿಕ ಶ್ರೀ ಸತ್ಯ ನಾರಾಯಣಸ್ವಾಮಿ ವ್ರತ
ಮಧ್ಯಾಹ್ನ 1.30ರಿಂದ ಅನ್ನ ಸಂತರ್ಪಣೆ,ರಾತ್ರಿ ಅಧಿವಾಸ ಹೋಮ ರಂಗಪೂಜೆ, ಗಿರಿಜಾ ಕಲ್ಯಾಣ, ಅಷ್ಟಾವಧಾನ ಸೇವೆ ಶಯನೋತ್ಸವ, ಪ್ರಸಾದ ವಿನಿಯೋಗ.
ದಿನಾಂಕ 15-01-2026ನೇ ಗುರುವಾರದಂದು ಬೆಳಗ್ಗೆ 9-00 ಗಂಟೆಗೆ ಗಣಪತಿ ಪೂಜೆ, ಪುಣ್ಯಾಹ, ಅಧಿವಾಸ ಹೋಮ, ಉದಯಬಲಿ, ಮಧ್ಯಾಹ್ನ ಅಧಿವಾಸ ಹೋಮ, ಮಹಾಗಣಪತಿ ಮೂಲ ಮಂತ್ರ 1008 ಇಕ್ಷು ಬಂಡ ಮಹಾಯಾಗ, ನವಗ್ರಹ ಸಹಿತ ಮಹಾಬಲಿ, ಕುಂಕುಮೋತ್ಸವ, ಪೂರ್ಣಾಹುತಿ ಧ್ವಜಾರೋಹಣ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ,
ಇದೇ ದಿನ ರಾತ್ರಿ 8-00ರಿಂದ 2-00ರವರೆಗೆ ಕಾಲಮಿತಿ ಯಕ್ಷಗಾನ, ಚಂಡಿಕೇಶ್ವರಿ ಶ್ರೀ ನಾಗೇಶ್ವರಿ ಶ್ರೀ ಸುಬ್ರಹ್ಮಣ್ಯ ಕೃಪಾಶ್ರಿತ ಯಕ್ಷಗಾನ ಮೇಳ ಶ್ರೀ ಕ್ಷೇತ್ರ ಅಲಸೆ, ಇವರು ವಿದ್ಯುತ್ ದೀಪಾಲಂಕೃತ ಭವ್ಯ ರಂಗಮಂಟಪದಲ್ಲಿ ನೂತನ ಪ್ರಸಂಗ ಅಭಿನಯಿಸಿ ತೋರಿಸಲಿದ್ದಾರೆ.
ದಿನಾಂಕ 16-01-2026ನೇ ಶುಕ್ರವಾರದಂದು ಬೆಳಗ್ಗೆ 8-00 ಗಂಟೆಗೆ ಪುಣ್ಯಾಹ, ಪಂಚಗವ್ಯ ಹೋಮ, ಅಭಿಷೇಕ, ಪ್ರಸಾದ ವಿನಿಯೋಗ.
ಈ ದೇವತಾ ಕಾರ್ಯವು
ವೇ।ಬ್ರ॥ ಶ್ರೀ ಶ್ರೀಧರ ಭಟ್ ಕೆಂಜಿಗಾಪುರ
ಪ್ರಧಾನ ಆರ್ಚಕರು, ಶ್ರೀ ಬಲಮುರಿ ಮಹಾಗಣಪತಿ ದೇವಸ್ಥಾನ, ಮೂಗುಡ್ತಿ ಹಾಗೂ
ಶ್ರೀ ರಾಘವೇಂದ್ರ ಭಟ್, ಆರ್ಚಕರು, ಶ್ರೀ ಬಲಮುರಿ ಮಹಾಗಣಪತಿ ದೇವಸ್ಥಾನ, ಮೂಗುಡ್ತಿ ಇವರುಗಳ ಪೌರೋಹಿತ್ಯದಲ್ಲಿ ಜರಗುವುದು.
ಜ.13 ರಿಂದ ಜ.16 ರವರೆಗಿನ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಸ್ತ ಗ್ರಾಮಸ್ಥರು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪಕರು,ಶ್ರೀ ಬಲಮುರಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಮತ್ತು ಗ್ರಾಮಸ್ಥರು, ಮೂಗುಡ್ತಿ ಇವರಿಂದ ವಿನಂತಿಸಲಾಗಿದೆ.











Leave a Reply