ರಿಪ್ಪನ್ ಪೇಟೆ: ಪ್ರತಿಯೊಬ್ಬರು ಸಮಾಜಕ್ಕಾಗಿ ದಾನ,ಧರ್ಮಾದಿಗಳನ್ನು ಮಾಡಬೇಕು.ಹುಟ್ಟುವಾಗ ಏನನ್ನು ತರಲಿಲ್ಲ ,ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ಇದರ ನಡುವೆ ನಾವು ಸಮಾಜಕ್ಕೆ ಸಮರ್ಪಿಸಿದರೆ ಸಮಾಜ ನಮ್ಮನ್ನು ನೆನೆಸಿಕೊಳ್ಳುತ್ತದೆ. ಕೊನೆಗೆ ಅಳಿಯೋದುಕಾಯ,ಉಳಿಯೋದು ಕೀರ್ತಿ . ಸಂಸ್ಕಾರ,ಸಂಸ್ಕೃತಿ,ನಮ್ಮ ಮುಂದಿನ ಪೀಳಿಗೆಗೆ ನಾವು ಕೊಟ್ಟಾಗ ಭವಿಷ್ಯ ಸಮೃದ್ಧವಾಗಿರಲು ಸಾಧ್ಯ ಎಂದು ಮಳಲಿ ಮಠದ ಶ್ರೀಗಳು ಆಶೀರ್ವಚನದಲ್ಲಿ ಹೇಳಿದರು.
ಗವಟೂರು ಗ್ರಾಮದ ಶ್ರೀ ಹೊಳೆ ಸಿದ್ದೇಶ್ವರ ದೇವಸ್ಥಾನದಲ್ಲಿ ಎಳ್ಳಮವಾಸ್ಯೆ ನಿಮಿತ್ತ ರುದ್ರಾಭಿಷೇಕ ಮತ್ತು ಧರ್ಮಸಭೆ ಆಯೋಜಿಸಲಾಗಿತ್ತು. ಗವಟೂರು,ಹಳಿಯೂರು,ಮಲ್ಲಾಪುರ,ತೆಂಕೋಲು,ಬಿಳಿಕಿ ಭಾಗದ ಗ್ರಾಮಸ್ಥರು ಈ ಧಾರ್ಮಿಕ ಕಾರ್ಯಕ್ರಮ ಪಾಲ್ಗೊಂಡಿದ್ದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಷ||ಬ್ರ||ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ದೇವಸ್ಥಾನದ ಮಾಜಿ ಅಧ್ಯಕ್ಷರಾದ ದುಂಡರಾಜಪ್ಪ ಗೌಡ್ರು ಮಾತನಾಡಿ ಶ್ರೀ ಹೊಳೆ ಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ಅನೇಕರ ಕೊಡುಗೆಯ ಬಗ್ಗೆ ಸ್ಮರಿಸಿದರು. ತಾ.ಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಅವರು ಮಾತನಾಡಿ ನಮ್ಮ ಬಳಿ ಅಧಿಕಾರ ಇದ್ದಾಗ ದೇವರ ಸೇವೆಯನ್ನು ಮಾಡಲು ಅವಕಾಶ ಸಿಕ್ಕಿತು ಯಥಃಶಕ್ತಿ ಮಾಡಿದ್ದೆವೆ ಎಂದರು.
ದೇವಸ್ಥಾನದ ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ತನು,ಮನ,ಧನ ಸಹಕಾರದೊಂದಿಗೆ ಗುರುಗಳ ಆಶೀರ್ವಚನದಲ್ಲಿ ಭಾಗವಹಿಸಿದ್ದದನ್ನು ದೇವಸ್ಥಾನದ ಅಧ್ಯಕ್ಷ ಉಲ್ಲಾಸ್ ತೆಂಕೋಲ್ ಉಲ್ಲೇಖಿಸಿ ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ ,ಕೃಷ್ಣ ಶೆಟ್ಟಿ,ಜನಾರ್ದನ ಕೋಟೆತಾರಿಗ,ಅರುಣ,ಕುಬೇರಪ್ಪ, ಚಂದ್ರಕಲಾ ಪ್ರಾರ್ಥಿಸಿದರು,ಗೌರವಾಧ್ಯಕ್ಷ ಜಿ.ಡಿ ಮಲ್ಲಿಕಾರ್ಜುನ್ ಸ್ವಾಗತಿಸಿದರು,ಸಮಿತಿಯ ಕಾರ್ಯದರ್ಶಿ ನಾಗೇಂದ್ರ ನಿರೂಪಿಸಿದರು. ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರಿದ್ದರು.















Leave a Reply