ಸಂಘಟನೆ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ
ಹೊಸನಗರ : ಸರ್ಕಾರದ ಚಟುವಟಿಕೆಗಳನ್ನ ವೀರೋಧಿಸಿದ ರಾಜೇಶ್ ಹಿರಿಮನೆಯವರನ್ನ ಜೈಲಿಗಟ್ಟುವ ಪ್ರಯತ್ನ ನಡೆದಿದೆ ಎಂದು ಸರ್ಕಾರದ,ಪೊಲೀಸ್ ವ್ಯವಸ್ಥೆ ವಿರುದ್ಧ ಪ್ರತಿಭಟಿಸುವ ಸಲುವಾಗಿ ಬಿಜೆಪಿ ಯುವ ಮೋರ್ಚ ನೊಂದ ಕಾರ್ಯಕರ್ತನ ಮನೆಗೆ ಭೇಟಿಕೊಟ್ಟು, “ಸರ್ಕಾರ ಸರ್ವಾಧಿಕಾರಿ ಧೋರಣೆಗಳಿಂದ ಬಿಜೆಪಿ ಕಾರ್ಯಕರ್ತರನ್ನು ಕುಗ್ಗಿಸಲು ಸಾಧ್ಯವಿಲ್ಲ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಗರ ಹೋಬಳಿಯ ಕಾರ್ಯಕರ್ತರಾದ ರಾಜೇಶ್ ಹಿರಿಮನೆಯವರ ವಿರುದ್ಧ, ಯಾರಿಂದಲೂ ದೂರು ದಾಖಲಾಗದಿದ್ದರೂ, ಪೊಲೀಸರೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿರುವುದು ರಾಜಕೀಯ ವೈಷಮ್ಯದ ಸೂಚಕವಾಗಿದೆ.
ಈ ಪ್ರಕರಣದ ಮೂಲಕ ರಾಜೇಶ್ ಹಿರಿಮನೆಯವರನ್ನು ಮಾನಸಿಕವಾಗಿ ಕುಗ್ಗಿಸಲು ಕಾಣದ ಕೈಗಳು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಆದರೆ ಇಂತಹ ಪ್ರಕರಣಗಳನ್ನು ದಾಖಲಿಸುವ ಮೂಲಕ ನಮ್ಮ ಸಂಘಟನೆಯ ಕಾರ್ಯಕರ್ತರು ಮತ್ತು ಮುಖಂಡರನ್ನು ಸೆದೆಬಡಿದು, ಭಯಪಡಿಸಿ, ಕುಗ್ಗಿಸಬಹುದು ಎಂದು ಭಾವಿಸುವ ವಿರೋಧಿಗಳಿಗೆ ಒಂದು ಸ್ಪಷ್ಟ ಮಾತೇನೆಂದರೆ ,ಈ ರೀತಿಯ ಕೃತ್ಯಗಳಿಂದ ಬಿಜೆಪಿ ಕಾರ್ಯಕರ್ತರು ಎಂದಿಗೂ ಎದೆಗುಂದುವುದಿಲ್ಲ; ಬದಲಿಗೆ ಸೈದ್ದಾಂತಿಕವಾಗಿ ಇನ್ನಷ್ಟು ಬಲಗೊಳ್ಳುತ್ತೇವೆ.
ಸಾಮಾನ್ಯ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿ ಗೆದ್ದೆವು ಎಂದು ಬೀಗಬೇಡಿ. “ದೇಶ ಮೊದಲು” ಎಂಬ ಚಿಂತನೆಯೊಂದಿಗೆ ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವ ರಾಜೇಶ್ ಹಿರಿಮನೆಯವರಂತಹ ದೇಶ ಭಕ್ತ ಕಾರ್ಯಕರ್ತ ನೊಂದಿಗೆ ಸಮಸ್ತ ಕಾರ್ಯಕರ್ತರ ಪಡೆ ಸದಾ ಅವರ ಜೊತೆ ನಿಂತಿರುತ್ತದೆ.
ರಾಜೇಶ್ ಹಿರಿಮನೆಯವರ ಮನೆಗೆ ತೆರಳಿ, ಸಂಘಟನೆ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂಬುದಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕುಕ್ಕೆ ಪ್ರಶಾಂತ್ ಹೇಳಿದರು.














Leave a Reply