ರಿಪ್ಪನ್ ಪೇಟೆ SSVVC ವಾಲಿಬಾಲ್ ನಲ್ಲಿ ಸಾಧನೆ
ರಿಪ್ಪನ್ ಪೇಟೆ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಖೇಲೋ ಸಂಸದ್ ಕ್ರೀಡಾಕೂಟದಡಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ರಿಪ್ಪನ್ ಪೇಟೆಯ ಪ್ರತಿಭಾವಂತ ಅಥ್ಲೀಟ್ ಆಯುಷ್ ಎಸ್.ಆರ್. ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಯುವ ಜನರಲ್ಲಿ ಕ್ರೀಡಾ ಪ್ರತಿಭೆ, ಶಿಸ್ತು, ನಾಯಕತ್ವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.ಕ್ರೀಡಾಕೂಟದ 200 ಮೀಟರ್ ಓಟ ಸ್ಪರ್ಧೆಯಲ್ಲಿ ಆಯುಷ್ ಎಸ್.ಆರ್. ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ ರಿಲೇ ಓಟ ಸ್ಪರ್ಧೆಯಲ್ಲಿ ತಂಡದೊಂದಿಗೆ ಪ್ರಥಮ ಸ್ಥಾನ ಸಾಧಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ರಿಪ್ಪನ್ ಪೇಟೆಯ ಶ್ರೀ ಸಿದ್ಧಿ ವಿನಾಯಕ ವಾಲಿಬಾಲ್ ಕ್ಲಬ್ ಕ್ರೀಡಾಪಟುಗಳು ಖೇಲೋ ಸಂಸದ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅದ್ಭುತ ಕ್ರೀಡಾ ಪ್ರದರ್ಶನ ನೀಡಿದರು. ಕ್ರೀಡಾಕೂಟದಲ್ಲಿ ರನ್ನರ್ ಅಪ್ ಆಗಿ ಸಾಧನೆಗೈದು ಸಂಸದ ರಾಘವೇಂದ್ರ ಮತ್ತು ಶಾಸಕ ಚನ್ನಬಸಪ್ಪ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಪ್ರಜ್ವಲ್,ಸುದೀಪ್,ಬದ್ರು,ವಿನಯ್,ಹರ್ಷ,ಷಣ್ಮುಕ,ಸೂಫಿಯಾನ್,ಗೌತಮ್, ನಿತೀಶ್ ಮತ್ತು ಹಿರಿಯ ಆಟಗಾರ ಸತೀಶ್ ಶೆಟ್ಟಿ,ಅಪ್ಪು, ರಾಮನಗರ ಹರ್ಷ, ಮತ್ತು ಇತರರು ಉಪಸ್ಥಿತರಿದ್ದರು. SSVVC ಸಾಧನೆಗೆ ಗ್ರಾಮಸ್ಥರು ಮತ್ತು ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

ಖೇಲೋ ಸಂಸದ್ ಕ್ರೀಡಾಕೂಟವು ಗ್ರಾಮೀಣ ಹಾಗೂ ನಗರ ಪ್ರದೇಶದ ಯುವ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸಿ, ಮುಂದಿನ ಹಂತದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಪ್ರತಿಭೆಗಳನ್ನು ಗುರುತಿಸುವ ಉದ್ದೇಶ ಹೊಂದಿದೆ. ಆಯುಷ್ ಅವರ ಸಾಧನೆ ಸ್ಥಳೀಯ ಯುವಕರಿಗೆ ಪ್ರೇರಣೆಯಾಗಿದೆ ಎಂದು ಸಂಸದರ ಕಾರ್ಯಾಲಯ ತಿಳಿಸಿದೆ.
ಈ ಸಾಧನೆಗೆ ಕ್ರೀಡಾಭಿಮಾನಿಗಳು, ತರಬೇತುದಾರರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು, ಭವಿಷ್ಯದಲ್ಲಿ ಆಯುಷ್ ಎಸ್.ಆರ್. ಮತ್ತು SSVVC ತಂಡ ಇನ್ನೂ ದೊಡ್ಡ ಮಟ್ಟದ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
















Leave a Reply