ತಾಯಿಯ ದರ್ಶನ ಪಡೆದ ತಾಲೂಕು ದಂಡಾಧಿಕಾರಿ ಭರತ್ ರಾಜ್ ಮತ್ತು ಸಿಬ್ಬಂದಿ ವರ್ಗ
ಕೆಂಚನಾಳ: ಪ್ರಸಿದ್ಧ ಕೆಂಚನಾಳ ಜಾತ್ರೆ ಅತ್ಯಂತ ವಿಜೃಂಭಣೆಯಿ೦ದ ನಡೆಯಿತು.ಸುತ್ತೂರಿನ ಭಕ್ತಾದಿಗಳು ವರ್ಷಕೆರೆಡು ಬಾರಿ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಅತ್ಯಂತ ಭಕ್ತಿ ,ಭಾವ ದಿಂದ ಸಾವಿರಾರು ಭಕ್ತರು ಪಾಲ್ಗೊಂಡರು.
ರಾಜ್ಯದಲ್ಲಿ ಏಕೈಕ-ವರ್ಷದಲ್ಲಿ ಎರಡು ಬಾರಿ ಜಾತ್ರೆ ನಡೆಯುವುದು ವಿಶೇಷ ಮಳೆಗಾಲದಲ್ಲಿ ಮಂಗಳವಾರ ಮತ್ತು ಬೇಸಿಗೆಯಲ್ಲಿ ಬುಧವಾರ ನಡೆಲಿದೆ.

ಜಾತ್ರಾ ಮಹೋತ್ಸವಕ್ಕೆ ತಾಲೂಕು ದಂಡಾಧಿಕಾರಿ ಭರತ್ ರಾಜ್ ಭೇಟಿ ಮಾಡಿ ತಾಯಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದರು.
ಮೊದಲು ಕೆಂಚನಾಳ ಜಾತ್ರೆಗೆ ಬಂದಿರುವೆ ಅತ್ಯಂತ ವ್ಯವಸ್ಥಿತವಾಗಿ ಈ ಜಾತ್ರಾ ಮಹೋತ್ಸವವು ನಡೆಯುತ್ತಿದೆ. ನಮ್ಮ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಈ ದೇವಾಲಯ ನಮ್ಮ ಇಲಾಖೆಯ ವತಿಯಿಂದ ಈ ಜಾತ್ರಾ ಮಹೋತ್ಸವದ ಉಸ್ತುವಾರಿ ದೇವಸ್ಥಾನದ ಸಮಿತಿಯವರೊಂದಿಗೆ ಸೇರಿ ನಿರ್ವಹಣೆ ಮಾಡಿದೆ ಎಂದು ಹೇಳಿ ಜಾತ್ರಾ ಮಹೋತ್ಸವದ ವಿಶೇಷತೆಯನ್ನು ತಿಳಿಸಿದರು.
ಪಿಎಸ್ಐ ರಾಜು ರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಮತ್ತು ಸಿಬ್ಬಂದಿ ವರ್ಗದಿಂದ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕೆಂಚನಾಳ ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಬಸಪ್ಪ , ಕಾರ್ಯದರ್ಶಿ ಪರಮೇಶ್ ,ಚಂದ್ರಪ್ಪ, ರಾಚಪ್ಪ, ಕರಿಬಸಪ್ಪ, ನಂಜುಡ,ಮಹಾಲಕ್ಷ್ಮಿ, ಸರೊಜಮ್ಮ ಮತ್ತು ನಾಗಾರ್ಜುನ ಸ್ವಾಮಿ, ದಾನೇಶ್ , ಸಂಜಯ್, ಮೋಹನ್,ನಾಗೇಶ್ ,ಧನುಷ್ , ಮತ್ತಿತರರಿದ್ದರು.















Leave a Reply