ವೀರಶೈವ ಸಂಪ್ರದಾಯದ ತತ್ವ ಆದರ್ಶ ಮೌಲ್ಯಗಳು ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಳ್ಳಿ ಯುವಕರಿಗೆ ಕರೆ
ಕೋಣಂದೂರು:ಮಾನವನ ಉದಾತ್ತ ಬದುಕಿಗೆ ಧರ್ಮವೇ ಮೂಲ. ವೀರಶೈವ ಧರ್ಮ ಸಂಸ್ಕೃತಿ ಗುರು ಪರಂಪರೆಯನ್ನು ಉತ್ತುಂಗಕ್ಕೆ ಬೆಳಸುವಲ್ಲಿ ಪಂಚಪೀಠಗಳ ಪಾತ್ರ ಹಿರಿದಾಗಿದೆ ಎಂದು ಶ್ರೀಮತ್ ಕಾಶಿ ಜ್ಞಾನ ಸಿಂಹಾಸನಾದೀಶ್ವರ ಶ್ರೀ ೧೦೦೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡುವರು.
ಕೋಣಂದೂರು ಸಮೀಪದ ಹಾದಿಗಲ್ಲು ಗ್ರಾಮದ ವೇ.ಶಂಕರಯ್ಯ ಶಾಸ್ತ್ರಿಗಳವರ ಮಾತಾಪಿತೃಗಳಾದ ಶ್ರೀಮತಿ ಗೌರಮ್ಮ ಶ್ರೀ ವೇ.ಶೇಖರಯ್ಯ ಆರಾಧ್ಯಮಠ ಇವರ ಸಹಸ್ರ ಚಂದ್ರದರ್ಶನದ ಅಂಗವಾಗಿ ಕಾಶಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಮತ್ತು ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಧ್ಯಾನ.ಪೂಜೆ ಅಧ್ಯಯನ ಆಧ್ಯಾತ್ಮಿಕ ಅಂತರ್ಮುಖಿಗಳಾದರೆ ಯಾವುದೇ ಸಮಸ್ಯೆಗಳನ್ನು ಎದುರಿಸುವ ಮೂಲಕ ಮನೋಬಲವನ್ನು ಹೆಚ್ಚುಸುತ್ತದೆ.ಬದುಕಿನಲ್ಲಿನ ಯಾವುದೇ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಿಕೊಳ್ಳಲು ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.
ಜಾತಿ ಭೇದವಿಲ್ಲದೆ ಎಲ್ಲರ ಶ್ರಯೋಭಿವೃದ್ದಿಯನ್ನು ಬಯಸುವುದೇ ವೀರಶೈವರ ಮೂಲದ್ಯೇಯವಾಗಿದೆ. ಸರ್ವಜನಾಂಗದ ಶ್ರೇಯಸ್ಸು ಬಯಸುವ ವೀರಶೈವ ಸಂಪ್ರದಾಯದ ತತ್ವ ಆದರ್ಶ ಮೌಲ್ಯಗಳು ಇಂದಿನ ಯುವ ಸಮೂಹ ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡು ಬಂದಲ್ಲಿ ಶಾಂತಿ ನೆಮ್ಮದಿಯೊಂದಿಗೆ ಸಮಾಜದ ಉನ್ನತಿಗೆ ದಾರಿರೀಪವಾಗಲಿದೆ ಎಂದರು.
ಹಣ ಸಂಪತ್ತು ಹುಡುಕಿಕೊಂಡು ಹೋಗುವ ವಸ್ತುವಲ್ಲ. ಅದು ನಮ್ಮ ಪರಿಶ್ರಮದಿಂದ ಬರುವ ಸಂಪತ್ತು ಶಾಶ್ವತವಾಗಿ ಉಳಿಯಲು ಸಾಧ್ಯ.ತಮ್ಮ ದುಡಿಮೆಯ ಹಣವನ್ನು ಉಳಿಸಿ ಧರ್ಮದ ಕಾರ್ಯಗಳಿಗೆ ದಾನವಾಗಿ ನೀಡಿದಾಗ ಬದುಕು ಸಾರ್ಥಕವಾಗುವುದೆಂದರು.
ಈ ಧಾರ್ಮಿಕ ಸಮಾರಂಭದಲ್ಲಿ ರೆಟ್ಟೆಹಳ್ಳಿ ಕಬ್ಬಿಣ ಕಂತಿಮಠದ ಷ.ಬ್ರ.ಶಿವಲಿಂಗ ಶಿವಾಚಾರ್ಯರು,ಬಿಳಕಿ ಹಿರೇಮಠದ ಷ.ಬ್ರ.ರಾಚೋಟೇಶ್ವರ ಶಿವಾಚಾರ್ಯರು, ತೊಗರ್ಸಿ-ಕ್ಯಾಸನೂರು ಮಠದ ಷ.ಬ್ರ.ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯರು,ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು.ಹಾಗೂ ಹಾದಿಗಲ್ಲು ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಶಂಕರಯ್ಯ ಶಾಸ್ತಿç ಉದ್ಯಮಿ ಕೆ.ಆರ್.ಪ್ರಕಾಶ,ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ ಇನ್ನಿತರರು ಪಾಲ್ಗೊಂಡಿದ್ದರು.















Leave a Reply