The 34th Annual Sahasradhika Satyanarayana Pooja will be held on Sunday, February 22, at Karangiri Sri Siddhivinayaka Temple under the auspices of Gramotthana Balaga.
ಹೊಸನಗರ : ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗ್ರಾಮೋತ್ಥಾನ ಬಳಗದ ಆಶ್ರಯದಲ್ಲಿ ಫೆಬ್ರವರಿ ೨೨ ರ ಭಾನುವಾರ 34 ನೇ ವರ್ಷದ ಸಹಸ್ರಾಧಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.

ಇದರ ಅಂಗವಾಗಿ ಫೆಬ್ರವರಿ ಶನಿವಾರ ಬೆಳಗ್ಗೆ ಗಣಪತಿ ಉಪನಿಷತ್ ಹವನ, ಶತರುದ್ರಾಭಿಷೇಕ, ಸೂರ್ಯಯಜ್ಞ ಮತ್ತು ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.
ದಿನಾಂಕ ೨೨ ರ ಭಾನುವಾರ ಸಹಸ್ರಾಧಿಕ ಸತ್ಯನಾರಾಯಣ ಪೂಜೆ, ಸತ್ಯನಾರಾಯಣ ವ್ರತೋದ್ಯಾಪನಾ ಹೋಮಾದಿಗಳು ನಡೆಯಲಿದೆ. ಅಂದು ನಡೆಯುವ ಸಾಮರಸ್ಯ ಸಮಾರಂಭದಲ್ಲಿ ತೀರ್ಥಹಳ್ಳಿಯ ಬಾಳಗಾರಿನ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದಾರ್ಯ ಅಕ್ಷೋಭ್ಯ ತೀರ್ಥ ಮೂಲಸಂಸ್ಥಾನದ ಕಿರಿಯ ಪೀಠಾಧಿಪತಿಗಳಾದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಅದಮ್ಯ ಚೇತನ ಪ್ರಾಯೋಜಿತ ‘ಅನಂತ ಪ್ಲೇಟ್ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಮನಸಂ ಸೀನಿಯರ್ ಲಿವಿಂಗ್‌ನ ಅನಂತರಾಮ್ ವರಯೂರು, ರಾಷ್ಟ್ರೋತ್ಥಾನ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಬಸವನಗೌಡ, ದಿನೇಶ್ ಜೋಷಿ ಫೌಂಡೇಷನ್ ಸಂಸ್ಥಾಪಕ ಅಬಸೆ ದಿನೇಶ್ ಜೋಷಿ, ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್. ಪ್ರಭಾಕರ ರಾವ್ ಭಾಗವಹಿಸಲಿದ್ದಾರೆ. ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಅಧ್ಯಕ್ಷತೆ ವಹಿಸಲಿದ್ದು ಕೃಷಿಕ ಸುಬ್ರಹಣ್ಯ ಭಂಡಾರಿ, ಅಂತರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟು ಶ್ರೀಮತಿ ಸ್ವಾತಿ ರವಿ ಇವರನ್ನು ಸನ್ಮಾನಿಸಲಾಗುವುದು. ಕಾರಣಗಿರಿ ಕಲಾದರ್ಶನದ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮಿನಾರಾಯಣ ಅವರು ಸತ್ಯನಾರಾಯಣ ವ್ರತಕಥೆ ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ನಡೆಯಲಿದ್ದು ಹೊಸನಗರದ ವಿನಾಯಕ ಲೋಕ ಖ್ಯಾತಿಯ ಕೆ. ಎಸ್. ವಿನಾಯಕ ಅವರಿಂದ ವಂದೇಮಾತರಂ ಕುರಿತು ಪ್ರದರ್ಶಿನಿ ಏರ್ಪಡಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಳಗದ ಅಧ್ಯಕ್ಷ ಕೆ. ಎಸ್. ನಳಿನಚಂದ್ರ ಕೋರಿದ್ದಾರೆ.

ಸಾಹಿತ್ಯ ಸಂಸ್ಕೃತಿ ಉತ್ಸವ : ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಎರಡು ದಿನಗಳ ಸಾಹಿತ್ಯ ಸಂಸ್ಕೃತಿ ಉತ್ಸವ ನಡೆಯಲಿದೆ.
ಫೆಬ್ರವರಿ 21 ನೇ ಶನಿವಾರ ಮಧ್ಯಾಹ್ನ 2 ರಿಂದ ಭಜನಾ ಸಂಗಮ ಹಾಗೂ ಸಂಜೆ 4:45 ರಿಂದ ನೂರಾರು ಕಂಠಗಳಿಂದ ವಂದೇ ಮಾತರಂ ಗೋಷ್ಠಿ ಗಾಯನ ಮತ್ತು ಸಂಜೆ 5:30 ರಿಂದ ಸಾಹಿತ್ಯಗೋಷ್ಠಿ ನಡೆಯಲಿದೆ.
ಹನಿಯ ರವಿ ಅಧ್ಯಕ್ಷತೆಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ಗರ್ತಿಕೆರೆ ರಾಘಣ್ಣ ಉದ್ಘಾಟಿಸಲಿದ್ದಾರೆ.ವಿಕ್ರಮ ವಾರ ಪತ್ರಿಕೆಯ ಗೌರವ ಸಂಪಾದಕ ನ. ನಾಗರಾಜ ವಂದೇ ಮಾತರಂ ಕುರಿತು ಶಿವರಾಮು ಅವರ ‘ಒಂದು ಕಥೆ ಒಂದು ವ್ಯಥೆ’ ಪುಸ್ತಕದ ಅವಲೋಕನ ನಡೆಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ನಿತ್ಯಾನಂದ ಹೆಬ್ಬಾರ್, ಲೇಖಕರು, ನಿವೃತ್ತ ಶಿಕ್ಷಕ ತಿರುಪತಿ ನಾಯಕ್ ಇವರನ್ನು ಸನ್ಮಾನಿಸಲಾಗುವುದು.
ಸಂಜೆ 7 ರಿಂದ ಕಲಾಭಾರತಿ ತಂಡದಿಂದ ಭರತನಾಟ್ಯ ಹಾಗೂ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 22 ರಂದು ಮಧ್ಯಾಹ್ನ ಸುವರ್ಧಿನಿ ನೃತ್ಯಶಾಲೆ ಮಾರುತಿಪುರ ಇವರಿಂದ ನೃತ್ಯ ಪ್ರದರ್ಶನ ನಡೆಯಲಿದೆ.

#shivamogga #hosanagara #karanagiri











Leave a Reply