ನಾಳೆ (ಜ.10)ಕಾರಣಗಿರಿಯಲ್ಲಿ ಸಂಗೀತೋತ್ಸವ

1241 ನಾಳೆ (ಜ.10)ಕಾರಣಗಿರಿಯಲ್ಲಿ ಸಂಗೀತೋತ್ಸವ
Spread the love

ಹೊಸನಗರ : ನಾದಬ್ರಹ್ಮ ಶ್ರೀ ತ್ಯಾಗರಾಜರ ಆರಾಧನೆಯ ನಿಮಿತ್ತ ಕಾರಣಗಿರಿ ಶ್ರೀ ಸಿದ್ಧಿ ವಿನಾಯಕ ಸಭಾಭವನದಲ್ಲಿ ಸಂಜೆ 4-00 ಗಂಟೆಗೆ ಸಂಗೀತೋತ್ಸವ ಕಾರ್ಯಕ್ರಮವನ್ನು  ಆಯೋಜಿಸಲಾಗಿದೆ.

ಗ್ರಾಮಭಾರತಿ ಟ್ರಸ್ಟ್ ರಾಷ್ಟ್ರೋತ್ಥಾನ ಬಳಗದ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಗರ್ತಿಕೆರೆ ರಾಘಣ್ಣ ಅವರು ನೆರವೇರಿಸಲಿದ್ದಾರೆ.

ಸ್ಥಳೀಯ ಸಂಗೀತ ಶಾಲೆಗಳವರಿಂದ ಗಾಯನ,ಸ್ಥಳೀಯ ಕಲಾವಿದರಿಂದ ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನವೂ ನಡೆಯಲಿದೆ. ಸಂಜೆ 5 ರಿಂದ ಸಂಗೀತ ಕಚೇರಿಯನ್ನು ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ವಿದ್ಯಾರ್ಥಿಗಳು ಯಲಹಂಕ ಬೆಂಗಳೂರು ಇವರ ವತಿಯಿಂದ ಏರ್ಪಡಿಸಲಾಗಿದೆ.

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಭಿಮಾನಿಗಳು ಭಾಗವಹಿಸಬೇಕೆಂದು ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ  ಬಳಗ ಕಾರಣಗಿರಿ ಅವರ ವತಿಯಿಂದ ವಿನಂತಿಸಲಾಗಿದೆ.


Spread the love

Leave a Reply

Your email address will not be published. Required fields are marked *