ಕೋಣಂದೂರು: ಬೃಹನ್ಮಠದಲ್ಲಿ ಜನವರಿ ೧೪ ರಂದು ಲೋಕಕಲ್ಯಾಣಾರ್ಥವಾಗಿ ಕಾಶಿ ಜಗದ್ಗುರು ಶ್ರೀಮತ್ ಕಾಶಿ ಜ್ಞಾನ ಸಿಂಹಾಸನಾದೀಶ್ವರ ಶ್ರೀ ೧೦೦೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಇಷ್ಟಲಿಂಗಮಹಾಪೂಜೆಯನ್ನು ಆಯೋಜಿಸಲಾಗಿದೆ ಎಂದು ಕೋಣಂದೂರು ಮಠದ ಶ್ರೀ.ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು. ಜನವರಿ ೧೩ ರಂದು ಮಂಗಳವಾರ ಸಂಜೆ ೬.೩೦ ಕ್ಕೆ ಶಾಪ ವಿಮೋಚನಾರ್ಥಹೋಮ,ಮಹಾಲಕ್ಷ್ಮಿ ಹೋಮ ಚಂಡಿಕಾ ಹೋಮ ರಾಹು-ಕೇತು-ಶಾಂತಿ ಹೋಮ ಮೃತ್ಯುಂಜಯ ಹೋಮ ಜನವರಿ ೧೪ ರಂದು ಬುಧವಾರ ಬೆಳಗ್ಗೆ ಬ್ರಾಹ್ಮಿ ಮೂಹರ್ತದಲ್ಲಿ ಶ್ರೀಗಳವರಿಂದ ವಿಶ್ವಶಾಂತಿಗಾಗಿ ಕರ್ತೃಗದ್ದುಗೆಗೆ ರಾಜೋಪಚಾರ ಪೂಜೆ, ಶಿವ ಅಷ್ಟೋತ್ತರ ವಿಘ್ನೇಶ್ವರ ಅಷ್ಟೋತ್ತರ, ರೇಣುಕ ಅಷ್ಟೋತ್ತರ ಶ್ರೀದೇವಿ ಅಷ್ಟೋತ್ತರ ವೀರಭದ್ರ ಆಷ್ಟೋತ್ತರ ಸಹಸ್ರನಾಮಪಾರಾಯಣ ಪಾದಪೂಜೆ ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದರ್ಶನಾಶೀರ್ವಾದ ಪಡೆಯುವಂತೆ ಮಠದ ಪ್ರಕಟಣೆ ತಿಳಿಸಿದೆ.
ಜನವರಿ 14 ರಂದು ಕೋಣಂದೂರಿನ ಬೃಹನ್ಮಠದಲ್ಲಿ- ಲೋಕಕಲ್ಯಾಣಾರ್ಥವಾಗಿ ಕಾಶಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ















Leave a Reply