ರಿಪ್ಪನ್‌ಪೇಟೆ: ಸಮೀಪದ ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಜನವರಿ 14 ರಂದು ಬೇಸಿಗೆ ಕಾಲದ ಜಾತ್ರೆ ನಡೆಯಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಪ್ರತಿ ವರ್ಷದಲ್ಲಿ ಎರಡು ಬಾರಿ ಜಾತ್ರಾ ಮಹೋತ್ಸವ ನಡೆಯುವುದು ವಿಶೇಷ ಮಳೆಗಾಲದಲ್ಲಿ ಮಂಗಳವಾರ ನಡೆದರೆ. ಬೇಸಿಗೆಯಲ್ಲಿ ಬುಧವಾರದೊಂದು ಜಾತ್ರೆ ಜರಗುವುದು ಮಾರಿಕಾಂಬಾ ಜಾತ್ರೋತ್ಸವದ ವಿಶೇಷವಾಗಿದೆ.
ಕೆಂಚನಾಲದ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸಾಗರದಂತೆ ಈ ಜಾತ್ರೋತ್ಸವಕ್ಕೆ ಹರಿದು ಬರುತ್ತಾರೆ.
ಜನವರಿ 14 ರಂದು ನಡೆಯುವ ಜಾತ್ರೋತ್ಸವದ ಸಿದ್ಧತೆ ಈಗಾಗಲೇ ಪ್ರಾರಂಭವಾಗಿದೆ.















Leave a Reply