ತಮಡಿಕೊಪ್ಪ ಶ್ರೀ ಬಸವೇಶ್ವರ ದೇವಸ್ಥಾನ ಮತ್ತು ರಿಪ್ಪನ್ ಪೇಟೆ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಅರ್ಚಕರ ಹುದ್ದೆಗೆ ಅರ್ಜಿ ಆಹ್ವಾನ
ರಿಪ್ಪನ್ ಪೇಟೆ: ಹೊಸನಗರ ತಾಲ್ಲೂಕು ಕೆರೆಹಳ್ಳಿ ಹೋಬಳಿಯ ಮುಜರಾಯಿ ದೇವಸ್ಥಾನವಾದ ತಮಡಿಕೊಪ್ಪ ಶ್ರೀ ಬಸವೇಶ್ವರ ದೇವಸ್ಥಾನ ಮತ್ತು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ರಿಪ್ಪನ್ ಪೇಟೆ – ಈ ದೇವಸ್ಥಾನದ ಅರ್ಚಕರ ಹುದ್ದೆ ಖಾಲಿ ಇದ್ದು ಷರತ್ತುಗಳನ್ವಯ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- 21 – 45 ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದು.
- ಆಗಮಶಾಸ್ತ್ರದಲ್ಲಿ ಉತ್ತೀರ್ಣರಾಗಿರುವ ಬಗ್ಗೆ ಸರ್ಟಿಫಿಕೇಟ್ ಹೊಂದಿರಬೇಕು.
- ವೇದ ಮಂತ್ರ ಸ್ವಷ್ಟವಾಗಿ ಪಠಿಸಲು ಕಲಿತೀರಬೇಕು.
- ಅರ್ಚಕರಾಗಿ ಕನಿಷ್ಟ 3 ವರ್ಷ ಸೇವೆ ಸಲ್ಲಿಸಿರುವ ಅನುಭವ ಇರಬೇಕು.
ಆಸಕ್ತರು ಹೊಸನಗರ ತಾಲ್ಲೂಕು ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದ್ದು ಹೆಚ್ಚಿನ ಮಾಹಿತಿಯನ್ನು ಕೆರೆಹಳ್ಳಿ ಹೋಬಳಿ ರಾಜಸ್ವ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಹೊಸನಗರ ತಾಲ್ಲೂಕು ತಹಶೀಲ್ದಾರ್ ಭರತ್ರಾಜ್ರವರು ತಿಳಿಸಿದ್ದಾರೆ.











Leave a Reply