ಗಂಗನಕೊಪ್ಪ ಸೀಗೆಕೊಪ್ಪ ರಸ್ತೆ ಸಂಪೂರ್ಣ ಹಾಳಾಗಿದೆ ಟಾರ್ ಹಾಕಿಸಿ,ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎನ್.ಪ್ರವೀಣ್ ಕುಮಾರ್‌ಗೆ ಮನವಿ

NAADI NEWS 20260121 182649 0000 ಗಂಗನಕೊಪ್ಪ ಸೀಗೆಕೊಪ್ಪ ರಸ್ತೆ ಸಂಪೂರ್ಣ ಹಾಳಾಗಿದೆ ಟಾರ್ ಹಾಕಿಸಿ,ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎನ್.ಪ್ರವೀಣ್ ಕುಮಾರ್‌ಗೆ ಮನವಿ
Spread the love

ಹೊಸನಗರ: ಹೊಸನಗರ ಸಮೀಪವಿರುವ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪ ಸೀಗೆಕೊಪ್ಪ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು ಅಲ್ಲಿನ ಗ್ರಾಮಸ್ಥರಿಗೆ ಓಡಾಟ ನಡೆಸುವುದೇ ಕಷ್ಟಕರವಾಗಿದೆ ರಸ್ತೆ ಹಾಳಾಗಿರುವ ಬಗ್ಗೆ ತಾಲ್ಲೂಕಿನ ಹಾಗೂ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಲಾಗಿದ್ದು  ಎನೂ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದು ಮುಂದಿನ ದಿನದಲ್ಲಿ ಮಳೆಗಾಲ ಆರಂಭವಾಗಲಿದ್ದು ಅಷ್ಟರ ಒಳಗೆ ರಸ್ತೆಗೆ ಡಂಬರ್ ಹಾಕಿಸಿ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷಜಿ.ಎನ್.ಪ್ರವೀಣ್‌ಕುಮಾರ್‌ ರವರಿಗೆ  ಮನವಿ ಪತ್ರ ಸಲ್ಲಿಸಿದರು.


ಸ್ವಂದಿಸಿದ ಅಧ್ಯಕ್ಷ ಜಿ.ಎನ್ ಪ್ರವೀಣ್‌ಕುಮಾರ್ ಗಂಗನಕೊಪ್ಪ-ಸೀಗೆಕೊಪ್ಪ  ಗ್ರಾಮದ ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿ ತಕ್ಷಣ ಶಾಸಕರ ಗಮನಕ್ಕೆ ಹಾಗೂ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ರಸ್ತೆ ಮಾಡಿಸುವ ಕಾರ್ಯಕ್ಕೆ ಕೈ ಹಾಕುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು.


Spread the love

Leave a Reply

Your email address will not be published. Required fields are marked *