ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಇಲ್ಲವಾದರೇ ಕೇಸು ದಂಡ ಗ್ಯಾರಂಟಿ : ತಹಶೀಲ್ದಾರ್ ಭರತ್‌ರಾಜ್

NAADI NEWS 20260119 161123 0000 1 ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಇಲ್ಲವಾದರೇ ಕೇಸು ದಂಡ ಗ್ಯಾರಂಟಿ : ತಹಶೀಲ್ದಾರ್ ಭರತ್‌ರಾಜ್
Spread the love

ಹೊಸನಗರ: ಹೊಸನಗರದಲ್ಲಿ ಜನವರಿ 20ರಿಂದ 28 ರವರೆಗೆ ಮಾರಿ ಜಾತ್ರೆ ನಡೆಯಲಿದ್ದು ಸಾವಿರಾರು ಜನರು ಜಾತ್ರಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಈ ಸಂದರ್ಭದಲ್ಲಿ ಅಂಗಡಿಯವರು ಕಮಿಟಿಯವರು ಹಾಗೂ ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಸ್ವಚ್ಛತೆಯಿಲ್ಲದಿದ್ದರೇ ಅಂಗಡಿಯವರ ಮೇಲೆ ಕೇಸು ಹಾಕಲಾಗುವುದು ದಂಡ ವಸೂಲಿ ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ,ತಹಶೀಲ್ದಾರ್ ಭರತ್‌ರಾಜ್‌ರವರು ಎಚ್ಚರಿಸಿದರು.


ಹೊಸನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಜಾತ್ರೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಎಚ್ಚರಿಸಿದರು. ಊರಿನ ನಾಗರೀಕರಾದ ತಾವು ನಮ್ಮ ಮನೆಯ ಜೊತೆಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ ಜಾತ್ರೆಗೆ ಬಂದು ಅಂಗಡಿ ಹಾಕಿರುವ ಅಂಗಡಿ ಮಾಲೀಕರು ನಿಮ್ಮ ಅಂಗಡಿಯ ಸುತ್ತ-ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಲ್ಲಿ ಬೇಕಾದಲ್ಲಿ ಪ್ಲಾಸ್ಟಿಕ್ ಹಾಕುವುದು ಮಾಡಿದರೇ ದಂಡ ಗ್ಯಾರಂಟಿ ಅದೇ ರೀತಿ ಜಾತ್ರೆಯಲ್ಲಿ ಹೋಟಲ್ ಇತ್ಯಾದಿ ಅಂಗಡಿಗಳನ್ನು ಇಟ್ಟುಕೊಂಡವರು ಅಲ್ಲೆ ತಿಂದು ಅಲ್ಲಿಯೇ ಎಂಜಲು ಎಸೆಯುವುದು ಅಲ್ಲಲ್ಲೇ ನೀರು ಚಲ್ಲುವುದು ಮಾಡಬೇಡಿ ಸ್ವಚ್ಛತೆಯೇ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಾಗಿದ್ದು ನಮ್ಮ ಸಿಬ್ಬಂದಿಗಳು ಗಂಟೆ-ಗಂಟೆಗೆ ಭೇಟಿ ನೀಡುತ್ತಿರುತ್ತಾರೆ. ಸ್ವಚ್ಛತೆಯನ್ನು ಕಾಪಾಡಿ ಎಂದು ಸಲಹೆ ನೀಡಿದರು.


ಭೇಟಿ ನೀಡುವ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್, ಆರೋಗ್ಯಾಧಿಕಾರಿ ಶೃತಿ ಗ್ರಾಮ ಆಡಳಿತಾಧಿಕಾರಿ ಲೋಹಿತ್ ಗ್ರಾಮ ಸಹಾಯಕ ಗಣೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *