ಹೊಸನಗರ: ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಮುಂಬರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಸಂಬಂಧ ೨೦೦೨ರಲ್ಲಿನ ಮತದಾರರ ಮ್ಯಾಪಿಂಗ್ ಕಾರ್ಯ ಹಾಗೂ ಪ್ರೋಜೆನಿಯ (ಸಂತತಿ) ಮ್ಯಾಪಿಂಗ್ ಕಾರ್ಯ ಈಗಾಗಲೇ ನಡೆಯುತ್ತಿದ್ದು ಹೊಸನಗರ ತಾಲ್ಲೂಕಿನ ಎಲ್ಲ ಮತದಾರರು ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ತಪ್ಪಿದ್ದಲ್ಲಿ ನೋಂದಾಯಿಸಿಕೊಳ್ಳ ಬೇಕೆಂದು ಹೊಸನಗರದ ತಹಶೀಲ್ದಾರ್ ಭರತ್ರಾಜ್ರವರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.
ಹೊಸನಗರದ ತಾಲ್ಲೂಕು ಕಛೇರಿಯ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.

ಹೊಸನಗರ ತಾಲ್ಲೂಕಿನ ಮತದಾರರಾದ ತಾವುಗಳು ತಾವು ಚಲಾತಿಸುತ್ತಿದ್ದ ನಿಮ್ಮ ಮತಗಟ್ಟೆಯ ಬಿ.ಎಲ್.ಓರವರ ಬಳಿ ಹೋಗಿ ತಮ್ಮ ಹೆಸರುಗಳು ಇದೆಯೇ ಇದ್ದರೇ ಮ್ಯಾಪಿಂಗ್ ಹಾಗೂ ಪ್ರೋಜೆನಿ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡಲೇ ಪರೀಕ್ಷಿಸಿಕೊಳ್ಳಿ ಹೆಚ್ಚಿನ ಮಾಹಿತಿಯನ್ನು ತಮ್ಮ ಮತಗಟ್ಟೆ ವ್ಯಾಪ್ತಿಯ ಬಿ.ಎಲ್.ಓರವರಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ವಿಶೇಷ ಸೂಚನೆ: ೨೦೦೨ರ ನಂತರ ಮದುವೆಯಾಗಿ ಗಂಡನ ಮನೆಗೆ ಬಂದವರ ಮ್ಯಾಪಿಂಗ್ ಕಾರ್ಯ ಆಗದೇ ಇರುವುದರಿಂದ ಸೊಸೆಯಂದಿರಾದ ತಾವುಗಳು ನಿಮ್ಮ ಮನೆಯ ಊರಿನ ಬಿ.ಎಲ್.ಓರವರನ್ನುಸಂಪರ್ಕಿಸಿ ೨೦೦೨ರ ಪಟ್ಟಿಯಲ್ಲಿನ ಅಂದರೇ ವಿಧಾನ ಸಬಾ ಕ್ಷೇತ್ರದ ಸಂಖ್ಯೆ- ೨೦೦೨ ಭಾಗದ ಸಂಖ್ಯೆ,- ತಂದೆ\ತಾಯಿ\ ನಿಮ್ಮ ಹೆಸರು ಹಾಗೂ ಕ್ರಮ ಸಂಖ್ಯೆಗಳನ್ನು ಬಿಎಲ್ಓ ಹತ್ತಿರ ನೀಡಿ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ಈ ಮೂಲಕ ಕೇಳಿಕೊಂಡಿದ್ದಾರೆ.

ಪತ್ರಿಕಾ ಘೋಷ್ಠಿಯಲ್ಲಿ ಚುನಾವಣಾ ಶಿರಾಸ್ಥೆದಾರ್ ಸತೀಶ್ ಬಿ.ಜೆ, ಮಹಮದ್ ರೈಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.













Leave a Reply