ಹೊಸನಗರ:ರೈತ ದಿನಾಚರಣೆಯ ಅಂಗವಾಗಿ ಇಂದು (23 ಡಿಸೆಂಬರ್ 2025) ಹೊಸನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಅನ್ನದಾತ ಮಹೋತ್ಸವವನ್ನು ಆಚರಿಸಲಾಯಿತು.
ರೈತ ದಿನಾಚರಣೆಯ ಅಂಗವಾಗಿ ಇಂದು (23 ಡಿಸೆಂಬರ್ 2025) ಹೊಸನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಅನ್ನದಾತ ಮಹೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಮಾಧವ ಅವರು ಮಾತನಾಡಿ, ರೈತರಿಗೆ ರೈತ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಈ ವೇಳೆ ಅವರು ಬ್ಯಾಂಕ್ನಿಂದ ರೈತರಿಗೆ ಲಭ್ಯವಿರುವ ವಿವಿಧ ರೈತಪರ ಯೋಜನೆಗಳ ಕುರಿತು ವಿವರವಾದ ಮಾಹಿತಿ ನೀಡಿದರು. ವಿಶೇಷವಾಗಿ ಕಡಿಮೆ ಬಡ್ಡಿದರದಲ್ಲಿ ತ್ವರಿತವಾಗಿ ದೊರೆಯುವ ಬಂಗಾರ ಅಡಮಾನ ಸಾಲ ಸೇರಿದಂತೆ ಇತರೆ ಸಾಲ ಸೌಲಭ್ಯಗಳ ಬಗ್ಗೆ ತಿಳಿಸಿ, ರೈತರು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳಾದ ಸರ್ವೇಶ್, ಆರ್ಯ, ಚೈತನ್ಯ, ಪ್ರತೀಕ್ಷಾ ಹಾಗೂ ಮಧುಕರ್ ಉಪಸ್ಥಿತರಿದ್ದರು. ಗಣೇಶ್ ಮಧುಕರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.













Leave a Reply