ಮದ್ಯವರ್ಜನ ಶಿಬಿರಗಳು ಸಮಾಜ ಪರಿವರ್ತನೆಗೆ ಅಗತ್ಯ – ವಿಜೇಂದ್ರ ಶೇಟ್

NAADI NEWS 20260103 154421 0000 ಮದ್ಯವರ್ಜನ ಶಿಬಿರಗಳು ಸಮಾಜ ಪರಿವರ್ತನೆಗೆ ಅಗತ್ಯ – ವಿಜೇಂದ್ರ ಶೇಟ್
Spread the love

ಹೊಸನಗರ:ಕುಡಿತ ಇಂದು ಸಮಾಜಕ್ಕೆ ಕಂಟಕಪ್ರಾಯವಾಗಿದೆ. ವಿಶೇಷವಾಗಿ ಯುವಪೀಳಿಗೆ ಅಧಃಪತನಕ್ಕೆ ಕಾರಣವಾಗುತ್ತಿದೆ ಎಂದು ನಿಕಟ ಪೂರ್ವ ವರ್ತಕರ ಸಂಘದ ಅಧ್ಯಕ್ಷ  ವಿಜೇಂದ್ರ ಶೇಟ್ ಆತಂಕ ವ್ಯಕ್ತಪಡಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿರುವ ೨೦೩೨ನೇ ಮದ್ಯವ್ಯರ್ಜನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


   ಮದ್ಯಪಾನ ಚಟಕ್ಕೆ ಅಂಟಿಕೊಂಡವರ ದುಡಿಮೆಯ ಬಹುಪಾಲು ವ್ಯಸನಕ್ಕೆ ವ್ಯಯವಾಗುತ್ತಿದೆ. ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮದ್ಯಪಾನದಂತಹ ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯನ್ನು ಸಾಮಾನ್ಯ ವ್ಯಕ್ತಿಯನ್ನಾಗಿ ಪರಿವರ್ತಿಸಲು ಮದ್ಯವ್ಯರ್ಜನ ಶಿಬಿರ ಸಹಕಾರಿಯಾಗಿದೆ ಎಂದರು.ಒಮ್ಮೆ ವ್ಯಸನಕ್ಕೆ ದಾಸರಾದರೆ, ಹೊರಬರುವುದು ಕಷ್ಟಕರ. ಯಾವುದೇ ಚಟ ಮನುಷ್ಯನನ್ನು ಅಂಧನನ್ನಾಗಿ ಮಾಡುತ್ತದೆ. ಆತನ ಜೀವನವನ್ನು ಸಂಪೂರ್ಣವಾಗಿ ಆವರಿಸಿ ಜೀವನದ ಸರ್ವಸ್ವವನ್ನು ಕಬಳಿಸುವ ಶಕ್ತಿ ವ್ಯಸನಕ್ಕಿದೆ. ಇಂತಹ ಪರಿಸ್ಥಿತಿಯಿಂದ ಬಿಡುಗಡೆ ಹೊಂದುವುದು ಸುಲಭವಲ್ಲ ಎಂದು ಎಚ್ಚರಿಸಿದರು.ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮೋಹನ್ ಶೆಟ್ಟಿ ಮಾತನಾಡಿ, ವ್ಯಸನಗಳಿಂದ ಬಡ ಹಾಗೂ ಮದ್ಯಮ ವರ್ಗದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಶಿಬಿರಗಳು ಇನ್ನಷ್ಟು ಹೆಚ್ಚುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.


   ವೇದಿಕೆಯ ಸದಸ್ಯ ಎನ್.ಆರ್.ದೇವಾನಂದ ಶಿಬಿರಕ್ಕೆ ಚಾಲನೆ ಮಾತನಾಡಿ ವ್ಯಸನಕ್ಕೆ ಬಲಿಯಾಗುತ್ತಿರುವವರು ಬಡವರು ಮತ್ತು ಮಧ್ಯಮ ವರ್ಗದವರು ಮನೆಯಲ್ಲಿ ಒಬ್ಬ ವ್ಯಕ್ತಿ ವ್ಯಸನಕ್ಕೆ ಬಲಿಯಾದರೇ ಇಡೀ ಕುಟುಂಬವೇ ದುರಂತಕ್ಕೆ ಕಾರಣವಾಗುತ್ತಿದೆ  ಇಡೀ ಕುಟುಂಬದಲ್ಲಿ ಶಾಂತಿ ನೆಮ್ಮದಿ ಹಾಳಾಗುತ್ತದೆ ಇಡೀ ದೇಶವನ್ನೇ ವ್ಯಸನ ಮುಕ್ತ ಮಾಡುವ ಗುರಿಯನ್ನು ಶ್ರೀಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಕೈಗೊಂಡಿದ್ದು ಈಗಾಗಲೇ ೨೦೩೧ ಶಿಬಿರವನ್ನು ಮುಗಿಸಿ ೨೦೩೨ನೇ ಶಿಬಿರಕ್ಕೆ ಕೈ ಹಾಕಲಾಗಿದೆ ನಾವು ಯಶಸ್ವಿಯಾಗಿ ಕಾರ್ಯಕ್ರಮ ಮುಗಿಸುವುದರ ಜೊತೆಗೆ ೯೦% ಯಶಸ್ವಿಯಾಗಿದ್ದೇವೆ ಎಂದರು.


    ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನಾಧಿಕಾರಿ ಪ್ರದೀಪ್‌ರವರು ಮಾತನಾಡಿ ಶಿಬಿರಗಳನ್ನು ಮಾಡುವುದು ನಮಗೆನೂ ಹೊಸದಲ್ಲ ನಾನು ಈಗಾಗಲೇ ಸಾವಿರಾರು ಶಿಬಿರಗಳನ್ನು ನಡೆಸಿದ್ದೇವೆ ನುರಿತ ತರಬೇತುದಾರರಿದ್ದಾರೆ ಶಿಬಿರಕ್ಕೆ ಬರುವ ಶಿಬಿರಾರ್ಥಿಗಳಿಗೆ ಒಂದು ವಾರಗಳ ಕಾಲ ಚನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಹೊಸ ರೂಪ ನೀಡಿ ಈ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯನ್ನಾಗಿ ಮಾಡುವ ಉದ್ದೇಶ ನಾವು ಹೊಂದಿದ್ದೇವೆ ಮಾಡುವ ಪ್ರಯತ್ನದಲ್ಲಿದ್ದೇವೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ ಎಂದರು.
      ಈ ಕಾರ್ಯಕ್ರದಲ್ಲಿ ಮೋಹನ್ ಜಿ ಶೆಟ್ಟಿ, ಸತೀಶ್,  ಎನ್.ಆರ್. ದೇವಾನಂದ್, ಪ್ರದೇಶಿಕ ಯೋಜನಾಧಿಕಾರಿ  ನಾಗರಾಜ ಕುಲಾಲ್, ಪ್ರದೀಪ್ ಹೆಗ್ಡೆ, ಶಶಿಕಲಾ, ನಾಗರತ್ನ ದೇವರಾಜ್, ಸದಾಶಿವ ಶ್ರೇಷ್ಠಿ, ಸತೀಶ ಕಾಲಸಸಿ, ಸೌಮ್ಯ, ನಾರಾಯಣ ಕಾಮತ್, ಡಾ.ಶಿವಯೋಗಿ, ಸತೀಶ್, ದೇವೇಂದ್ರ. ಕುಮಾರ್ ಟಿ,  ಮತ್ತಿತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *