ಮುಂಬಾರು ಮಂಡಲದ ಹಿಂದೂ ಸಂಗಮ
ಮುಂಬಾರು: ಹಿಂದೂಗಳಿಗೆ ಭಾರತ ಒಂದೇ ದೇಶವಲ್ಲ, 198 ದೇಶದವರಿಗೆ ಹಿಂದೂಗಳು ಬೇಕಾಗಿದೆ. ಹಿಂದೂಗಳು ಅಥವಾ ಭಾರತೀಯರು ಎಂದರೆ ಅತ್ಯಂತ ಬುದ್ದಿವಂತ ಜೀವಿಗಳು ಅವರು ನಮ್ಮ ದೇಶಕ್ಕೆ ಬರಲಿ ಎಂದು ಈಡೀ ವಿಶ್ವ ಯೋಚಿಸುವಂತೆ ಇಂದು ಭಾರತ ಸಶಕ್ತವಾಗಿದೆ. ಹಿಂದೂ ಸಂಗಮದ ಉದ್ದೇಶ ಹಿಂದೂ ಸಮಾಜವನ್ನು ಒಂದುಗೂಡಿಸುವುದು ಭಾರತಿಯತೇಯನ್ನು ಸಾರುವುದಾಗಿದೆ. ಭಾರತದಲ್ಲಿರುವ ಎಲ್ಲರೂ ಕೂಡ ಹಿಂದೂಗಳೇ ,ಅನ್ಯಮತೀಯರು ಎಂದು ಹೇಳುವಂತವರಿಗೆ ನಾವಿಂದು ಅರ್ಥೈಸಬೇಕಿದೆ ನಿಮ್ಮ ಪೂರ್ವಜರು ಕೂಡ ಹಿಂದೂಗಳೇ ನಾವೆಲ್ಲ ಒಂದೇ ನಾಗರಿಕತೆಗೆ ಸೇರಿಸದವರೆಂದು ಹೇಳುವ ಮೂಲಕ ಸಶಕ್ತ, ಸಮೃದ್ಧ ಭಾರತದ ನಿರ್ಮಾಣವನ್ನು ಮಾಡಬೇಕಿದೆ. ಜಗತ್ತಿನಲ್ಲಿ ಯಾರ ವಿರುದ್ಧವೂ ಹುಟ್ಟಿದ ನಾಗರಿಕತೆ ನಮ್ಮದಲ್ಲ, ಜಗತ್ತಿಗೆ ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳಿದ ಸನಾತನ ನಾಗರಿಕತೆಯ ಭಾಗವಾಗಿದ್ದೆವೆ.
ಹಿಂದೂ ಸಂಘಟಿತನಾಗಲಾರ ಹಿಂದುಗಳು ನಾಲ್ಕು ಜನ ಸೇರಿದ್ದಾರೆ ಅಂದರೆ ಅಂದು ಒಬ್ಬರ ಸ್ವರ್ಗಸ್ತರಾಗಿದ್ದಾರೆ ಎಂದರ್ಥವಾಗಿತ್ತು ಅಂತಹ ಕಾಲಘಟ್ಟದಲ್ಲಿ ಹಿಂದೂ ಸಮಾಜವನ್ನು ಸಂಘಟಿಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ ಅದರ ಶತಮಾನೋತ್ಸವದ ಸಂಧರ್ಭದಲ್ಲಿ ಹಿಂದೂ ಸಮಾಜವೇ ಹಿಂದೂ ಸಂಗಮದ ಮೂಲಕ ಹಿಂದುಗಳನ್ನು ಸಂಘಟಿಸುತ್ತಿದೆ ಎಂದು ತಮ್ಮ ದಿಕ್ಸೂಚಿ ಭಾಷಣದಲ್ಲಿ ಪ್ರಾಂತ ಸಹಸಂಪರ್ಕ ಪ್ರಮುಖ್ ಯಾದವಕೃಷ್ಣ ಹೇಳಿದರು.
ಮುಂಬಾರು ಮಂಡಲದ ಹಿಂದೂ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಮಣ್ಣ ಮಾತನಾಡಿ ಮುಂಬಾರು ಪಂಚಾಯತಿಯ ಹಿಂದೂ ಸಮಾಜ ಒಂದಾಗಿ ಬಾಳಬೇಕು ನಾವೆಲ್ಲ ಒಂದಾಗಿ ಬಾಳಿದರಷ್ಟೇ ಭಾರತ ಮುಂದೆ ಭಾರತವಾಗಿಯೇ ಇರಲಿದೆ ಎಂದು ಎಚ್ಚರಿಸಿದರು.
ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಆಯೋಜನೆಯೊಂದಿಗೆ ಸ್ಥಳೀಯ ಮಹಿಳಾ ಭಜನ ಮಂಡಳಿಗಳಿಂದ ಅತ್ಯದ್ಭುತವಾಗಿರುವಂತಹ ಭಜನೆಗಳನ್ನು ಮಾತಾ ಭಗಿನಿಯರು ಭಜಿಸಿದರು.
ಸತ್ಯನಾರಾಯಣ ವ್ರತದ ಪೌರೋಹಿತ್ಯವನ್ನು ಪ್ರಮುಖ್ ಪುರೋಹಿತ್ ನೇರವೇರಿಸಿಕೊಟ್ಟರು. ಈ ಸಂಧರ್ಭದಲ್ಲಿ ಹರೀಶ್, ರಾಮಣ್ಣ, ಉಮೇಶ್, ಕಾರ್ತಿಕ್ , ಕೀರ್ಥೇಶ್, ದೀಪು, ಗಣೇಶ್, ಶಿವಾನಂದ,ಕಿರಣ್ ಕರಡಿಗ, ಆದರ್ಶ, ರಾಘು ಹೆಗ್ಗೆರೆ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.












Leave a Reply