ಸಹಸ್ರ ಸಹಸ್ರ ಸಂಖ್ಯೆಯ ಶೋಭಾಯಾತ್ರೆ|ಇತಿಹಾಸ ಸೃಷ್ಟಿಸಿದ ಹಿಂದೂ ಸಂಗಮ

NAADI NEWS 20260203 145551 0000 ಸಹಸ್ರ ಸಹಸ್ರ ಸಂಖ್ಯೆಯ ಶೋಭಾಯಾತ್ರೆ|ಇತಿಹಾಸ ಸೃಷ್ಟಿಸಿದ ಹಿಂದೂ ಸಂಗಮ
Spread the love

ರಿಪ್ಪನ್ ಪೇಟೆ : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಿಂದೂ ಸಮಾಗಮವೇ ಸಾಗಿತು. ಎಲ್ಲಿ ನೋಡಿದರಲ್ಲಿ ಕೇಸರಿಮಯವಾಗಿ ವಿನಾಯಕ ವೃತ್ತ ಕಂಗೊಳಿಸುತ್ತಿತ್ತು.

20260202 1701406980833595086579600 ಸಹಸ್ರ ಸಹಸ್ರ ಸಂಖ್ಯೆಯ ಶೋಭಾಯಾತ್ರೆ|ಇತಿಹಾಸ ಸೃಷ್ಟಿಸಿದ ಹಿಂದೂ ಸಂಗಮ
ಶೋಭಾಯಾತ್ರೆಯ ಪೂರ್ವದಲ್ಲಿ ನೂರಾರು ಕಾರ್ಯಕರ್ತರ ಉಪಸ್ಥಿತಿಯಲ್ಲಿ  ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕರಾದ ಶ್ರೀಶ ಭಟ್ಟರು ಗೋಪೂಜೆಯನ್ನು ನೆರವೇರಿಸಿಕೊಟ್ಟರು.

  ಶೋಭಾಯಾತ್ರೆಯು ವಿಶೇಷವಾಗಿ  ಗೋಪೂಜೆಯ ಮೂಲಕ  ಜಿ. ಎಸ್.ಬಿ ಸಭಾಭವನದ ದಿಂದ ಪ್ರಾರಂಭವಾಯಿತು.  ಶೋಭಾಯಾತ್ರೆಯಲ್ಲಿ ಮಹಿಳೆಯರು ಕೇಸರಿ ಬಾವುಟವನ್ನು ಹಿಡಿದು ಕೇಸರಿ ಶಾಲುನ್ನು ಧರಿಸಿ ಘೋಷಣೆಗಳನ್ನ ಕೂಗುತ್ತಿದ್ದರು. ಯುವಕರು, ಪುರುಷರು, ಭಾರತ ಮಾತಾ ಕಿ ಜೈ, ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ ಶುಭಾಯಾತ್ರೆಯ ಉತ್ಸಾಹವನ್ನು ಇನ್ನಷ್ಟು ಇಮ್ಮಡಿಗೊಳಿಸಿದರು.

20260202 1801551345402184684998215 ಸಹಸ್ರ ಸಹಸ್ರ ಸಂಖ್ಯೆಯ ಶೋಭಾಯಾತ್ರೆ|ಇತಿಹಾಸ ಸೃಷ್ಟಿಸಿದ ಹಿಂದೂ ಸಂಗಮ
ಕಾರ್ಯಕರ್ತರ ಪಡೆ

  ವಿಶೇಷವಾಗಿ ಮಕ್ಕಳು ರಾಷ್ಟ್ರ ಪುರುಷರ, ಪೌರಾಣಿಕ ವೇಷಭೂಷಣವನ್ನು ಧರಿಸಿ ಶೋಭಯಾತ್ರೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದರು.

20260202 17303217100053661642271939 ಸಹಸ್ರ ಸಹಸ್ರ ಸಂಖ್ಯೆಯ ಶೋಭಾಯಾತ್ರೆ|ಇತಿಹಾಸ ಸೃಷ್ಟಿಸಿದ ಹಿಂದೂ ಸಂಗಮ
ಶೋಭಾಯಾತ್ರೆಯ ಮೆರಗನ್ನು ಹೆಚ್ಚಿಸಿದ ಚಂಡೆ ವಾದನ
20260202 1733196304748144478669563 ಸಹಸ್ರ ಸಹಸ್ರ ಸಂಖ್ಯೆಯ ಶೋಭಾಯಾತ್ರೆ|ಇತಿಹಾಸ ಸೃಷ್ಟಿಸಿದ ಹಿಂದೂ ಸಂಗಮ
20260202 1734496209559576715578491 ಸಹಸ್ರ ಸಹಸ್ರ ಸಂಖ್ಯೆಯ ಶೋಭಾಯಾತ್ರೆ|ಇತಿಹಾಸ ಸೃಷ್ಟಿಸಿದ ಹಿಂದೂ ಸಂಗಮ
ಪೌರಾಣಿಕ ಮತ್ತು ರಾಷ್ಟ್ರ ಪುರುಷರ ವೇಷಭೂಷಣ ಧರಿಸಿದ ಮಕ್ಕಳು

  ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ಪೂರೈಸಿದ ಸಂಧರ್ಭದಲ್ಲಿ ಹಿಂದೂ ಸಂಗಮ ಕಾರ್ಯಕ್ರಮವನ್ನು ದೇಶದ 1 ಲಕ್ಷಕ್ಕೂ ಅಧಿಕ ಸ್ಥಳಗಳಲ್ಲಿ ನಡೆಸಲಾಗಿದೆ. ರಿಪ್ಪನ್ ಪೇಟೆ ಮಂಡಲ ದ ಹಿಂದೂ ಸಂಗಮ ಕಾರ್ಯಕ್ರಮದ ಶೋಭಯಾತ್ರೆಯೂ ಅತ್ಯಂತ ವಿಜೃಂಭಣೆಯಿಂದ ನಡೆಯಿತು.


Spread the love

Leave a Reply

Your email address will not be published. Required fields are marked *