ನಾಳೆ(ಫೆ.1) ಹೊಸನಗರ ಪಟ್ಟಣ ಸೇರಿದಂತೆ ವಿವಿಧೆಡೆ ಹಿಂದೂ ಸಂಗಮ ಕಾರ್ಯಕ್ರಮ

IMG 20260131 WA0027 ನಾಳೆ(ಫೆ.1) ಹೊಸನಗರ ಪಟ್ಟಣ ಸೇರಿದಂತೆ ವಿವಿಧೆಡೆ ಹಿಂದೂ ಸಂಗಮ ಕಾರ್ಯಕ್ರಮ
Spread the love

ನಾಳೆ ಹೊಸನಗರ, ಗರ್ತಿಕೆರೆ, ಕೋಡೂರು, ನಿಟ್ಟೂರು ಹಿಂದೂ ಸಂಗಮ

ಹೊಸನಗರ: ದೇಶಾದ್ಯಂತ ನಡೆಯುತ್ತಿರುವ ಹಿಂದು ಸಂಗಮ ಕಾರ್ಯಕ್ರಮವು ಈಡೀ ಹಿಂದೂ ಸಮಾಜವನ್ನು ಸಂಘಟಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ದೊಡ್ಡ ಕಾರ್ಯಕ್ರಮಗಳನ್ನು ಮಾಡದೆ ದೇಶದ 1 ಲಕ್ಷ ಸ್ಥಳಗಳಲ್ಲಿ ಹಿಂದೂ ಸಂಗಮ ಕಾಯಕ್ರಮವನ್ನು ಹಿಂದೂ ಸಮಾಜವೇ ಮಾಡುತ್ತಿದೆ.

ನಾಳೆ (ಫೆ .1) ರಂದು ಬೆಳಿಗ್ಗೆ 10:00 ಗಂಟೆಗೆ,ಹೊಸನಗರದ ಗಾಯತ್ರಿ ಮಂದಿರದಲ್ಲಿ ಪ್ರಥಮವಾಗಿ ಗೋಪೂಜೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದೆ. ಮೊದಲ ಅವಧಿಯಲ್ಲಿ ಸಾಮೂಹಿಕ ಶ್ರೀಮದ್ ಭಗವದ್ಗೀತಾ ಪಠಣ,ಎರಡನೇ ಅವಧಿಯಲ್ಲಿ ಚಿಂತನ -ಚರ್ಚಾ ನಡೆಯಲಿದೆ.  ಮೂರನೇ ಅವಧಿಯಲ್ಲಿ ದಿಕ್ಸೂಚಿ ಭಾಷಣವನ್ನು ಆರೆಸ್ಸೆಸ್ ನ ಅಖಿಲ ಭಾರತ ವ್ಯವಸ್ಥ ಪ್ರಮುಖರಾದ  ಶ್ರೀ ಮಂಗೇಶ ಬೇಂಡೆ  ಇವರು ನಡೆಸಿಕೊಡಲಿದ್ದಾರೆ.

img 20260124 wa01503598079951597153866 ನಾಳೆ(ಫೆ.1) ಹೊಸನಗರ ಪಟ್ಟಣ ಸೇರಿದಂತೆ ವಿವಿಧೆಡೆ ಹಿಂದೂ ಸಂಗಮ ಕಾರ್ಯಕ್ರಮ

ಹೊಸನಗರ ಪಟ್ಟಣದ ಮಾತಾ- ಭಗಿನಿಯರು, ಯುವಕರು, ಸರ್ವ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ  ಭಾಗವಹಿಸುವಂತೆ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ವಿನಂತಿಸಲಾಗಿದೆ.

🔴 ಕೋಡೂರು ಶಂಕರೇಶ್ವರ ದೇವಸ್ಥಾನದ ಸಭಾಭವನದಲ್ಲಿ   ನಾಳೆ ಫೆಬ್ರವರಿ ಒಂದರಂದು ಬೆಳಗ್ಗೆ 10 :00 ಗಂಟೆಗೆ ಹಿಂದೂ ಸಂಗಮ ಕಾರ್ಯಕ್ರಮ ಮತ್ತು ಸಾಮೂಹಿಕ ಸತ್ಯನಾರಾಯಣ ಬ್ರದರ್ ಕಾರ್ಯಕ್ರಮದ ಮುಖ್ಯಭಾಷಣಕಾರರಾಗಿ ಗಿರೀಶ್ ಕಾರಂತ್ ಅವರು ಭಾಗವಹಿಸಲಿದ್ದಾರೆ. ವಿವಿಧ ಭಜನಾ ಮಂಡಳಿಯಿಂದ ಭಜನೆ ಇರಲಿದೆ. ಕರ್ನಾಟಕ ಜಾನಪದ ಕಲೆಗಳಲ್ಲಿ ಪ್ರಸಿದ್ಧವಾದ  ಜಡೆ ಕೋಲಾಟ ಪ್ರದರ್ಶನವು ಇರಲಿದೆ.

🟢 ಗರ್ತಿಕೆರೆ ಅಮೃತ ಮಂಡಲದಲ್ಲಿ  ನಾಳೆ ಸಂಜೆ 5:00ಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಮುಚ್ಚ ಭಾಷಣಕಾರರಾಗಿ ಶಿವಮೊಗ್ಗದ ಶಾಸಕರಾದ ಶ್ರೀ ಚನ್ನಬಸಪ್ಪ  ಅವರು ಭಾಗವಹಿಸಲಿದ್ದಾರೆ.

🔴 ನಿಟ್ಟೂರು ಮಂಡಲ ನಾಳೆ ಬೆಳಗ್ಗೆ 11 ಗಂಟೆಯಿಂದ ನಿಟ್ಟೂರು ಮಂಡಲದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ ಸ್ಥಳ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು. ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹಕಾರದ ಶ್ರೀ ಶರಣ್ ಪಂಪವೆಲ್ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ.

ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿ ವತಿಯಿಂದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೊರಿದ್ದಾರೆ.


Spread the love

Leave a Reply

Your email address will not be published. Required fields are marked *