ಹಿಂದೂ ಸಂಗಮದ ಕರಪತ್ರ ಬಿಡುಗಡೆ | ಎಲ್ಲಾ ಜಾತಿ ಬೇಧ ಮರೆತು ಹಿಂದೂ ಸಂಗಮದಲ್ಲಿ ಭಾಗವಹಿಸೋಣ – ವಿನಯ್ ಶೆಟ್ಟಿ
ಹೆದ್ದಾರಿಪುರ: ಇದೇ ಬರುವ ಜನವರಿ 31ರ ಶನಿವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮದ ನಿಮಿತ್ತ ಇಂದು ಹಿಂದೂ ಸಂಗಮ ನಿರ್ವಹಣಾ ಸಮಿತಿಯ ವತಿಯಿಂದ ಮಾಸ್ತಿಯಮ್ಮ ದೇವಸ್ಥಾನದ ಸಮೀಪದಲ್ಲಿ ಧರ್ಮ ಧ್ವಜ ಏರಿಸಲಾಯಿತು.

ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಹಿಂದೂ ಸಂಗಮದ ಕರಪತ್ರಗಳನ್ನು ಬಿಡುಗೊಳಿಸಿಲಾಯಿತು. ತದನಂತರ ತಾಲೂಕು ಆಯೋಜನ ಸಮಿತಿಯ ಅಧ್ಯಕ್ಷ ವಿನಯ್ ಶೆಟ್ಟಿ ಮಾತನಾಡಿ ಹಿಂದೂ ಸಮಾಜವು ಗ್ರಾಮ ಗ್ರಾಮಗಳಿಂದ ಹಿಂದೂ ಸಂಗಮದಲ್ಲಿ ಭಾಗವಹಿಸಿದರೆ ಮುಂದಿನ ಭವಿಷ್ಯ ಉಜ್ವಲವಾಗಿರಲಿದೆ ಎಲ್ಲರೂ ಜಾತಿ ,ಮತ, ಬೇಧ ತೊರೆದು ಭಾಗವಹಿಸೋಣ ಎಂದು ಕರೆ ನೀಡಿದರು.

ಹಿರಿಯರಾದ ನಾಗೇಂದ್ರಪ್ಪ ಗೌಡರು ಮಾತನಾಡಿ ಹೆದ್ದಾರಿಪುರದ ಗ್ರಾಮ ಪಂಚಾಯಿತಿಯ ಎಲ್ಲಾ ಬಂಧುಗಳು ತನು ಮನ ಧನ ಸಹಕಾರದೊಂದಿಗೆ ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಶೋಭಯಾತ್ರೆಯ ಮೂಲಕ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು,ಮಕ್ಕಳಿಗೆ ಛದ್ಮವೇಷ ಕಾರ್ಯಕ್ರಮ ಇರಲಿದೆ. ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಭಾಗವಹಿಸಲಿದ್ದಾರೆ ಎಂದು ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ಕುಮಾರ್ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಂಬಳ್ಳಿ ಗಿರೀಶ್, ಕಿರಣ್ ಕರಡಿಗ,ಗ್ರಾ. ಪಂ ಸದಸ್ಯರಾದ ವಿಶುಕುಮಾರ್, ನಾಗರತ್ನ ಮತ್ತು ರಾಮಣ್ಣ,ಸಂತೋಷ್, ಅರುಣ್ ಕುಮಾರ್.ಡಿ,ನವೀನ, ಅನ್ವೇಷ್, ರಾಘವೇಂದ್ರ ಹೆಗ್ಗೆರೆ , ನಿಖಿಲ, ಸುಧೀಂದ್ರ, ರಮೇಶ್ ಗೌಡರು, ಮಂಜು ಶೆಟ್ಟರು,ಮತ್ತು ಅನೇಕರು ಹಾಜರಿದ್ದರು.












Leave a Reply