ಹಿಂದೂಗಳನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ:ಶಾಸಕ ಚೆನ್ನಬಸಪ್ಪ
ಶಿವಮೊಗ್ಗ: ತಿಪ್ಪರಲಾಗ ಹೊಡೆದರೂ ಕಾಂಗ್ರೆಸ್ ನಿಂದ ಹಿಂದುಗಳನ್ನು ಬೆದರಿಸುವುದಾಗಲೀ, ಸತ್ಯವನ್ನು ಹೇಳುವುದನ್ನು ತಡೆಯುವುದಾಗಲೀ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಸವಾಲು ಹಾಕಿದ್ದಾರೆ.
ನಗರ ಬಿಜೆಪಿ ವತಿಯಿಂದ ದ್ವೇಷ ಭಾಷಣ, ದ್ವೇಷ ಅಪರಾಧ ಕಾನೂನು ವಿರೋಧಿಸಿ ನಗರದ ಶಿವಪ್ಪನಾಯಕ ಪ್ರತಿಮೆ ಬಳಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ಯಾರೂ ಮಾತಾಡಬಾರದು. ನಾವು ಮಾಡಿದೇ ಸರಿ ಅಂತ ದ್ವೇಷ ಭಾಷಣ, ದ್ವೇಷ ಅಪರಾಧ ಕಾನೂನು ತಂದಿದ್ದಾರೆ. ದ್ವೇಷ ಅಪರಾಧ ಪದದ ಅರ್ಥ ಡಿಕ್ಷನರಿಯಲ್ಲೇ ಇಲ್ಲ ಎಂದು ಕಿಡಿಕಾರಿದರು.
ಚರ್ಚೆಗೆ ಅವಕಾಶ ಕೊಡದೇ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ಪಡೆದರು. ದಕ್ಷಿಣ ಕನ್ನಡ ಜಿಲ್ಲೆಯವರು ಬೆಂಕಿ ಹಚ್ಚುವವರು ಎಂದು ವಿಧಾನಸಭೆಯಲ್ಲಿ ಸಚಿವರೊಬ್ಬರು ಹೇಳಿದಾಗ ಇದು ದ್ವೇಷದ ಭಾಷಣ ಅಂತ ಕಾಂಗ್ರೆಸ್‌ನವರಿಗೆ ಅನ್ನಿಸಲಿಲ್ಲ, ಆ ಜಿಲ್ಲೆಯ ಜನರಿಗೆ ಅಪಮಾನ ಮಾಡಿದರು. ವಿರೋಧ ಪಕ್ಷದ ಶಾಸಕರು, ನಾಯಕರು ಮಾತನಾಡದೇ ಬಿಲ್ ಪಾಸ್ ಆಯಿತು. ಕಳ್ಳನ ಮನಸ್ಸು ಹುಳ್ಳಗೆ ಅನ್ನುವ ರೀತಿ ವಿಧೇಯಕ ಪಾಸ್ ಮಾಡಿದರು. ಇದು ಸಂವಿಧಾನ ಬಾಹಿರ ಎಂದು ದೂರಿದರು.
ಇದು ದುಷ್ಕೃತ್ಯದ ಮಾನಸಿಕತೆ, ಸಾಮಾನ್ಯ ನಾಗರೀ ಕರಿಗೂ ಈ ಕಾನೂನು ಸಂಕಷ್ಟ ತರುತ್ತದೆ. ಯಾರೂ ಯಾರಿಗೂ ಜೋರು ಮಾಡುವ ಹಾಗಿಲ್ಲ, ಕೇಸ್ ಹಾಕ ಬಹುದು. ನಾವು ಸತ್ಯ ಸಂಗತಿ ಹೇಳಿದರೆ ದ್ವೇಷ ಭಾಷಣ ಅನ್ನಿಸಿ ಕಾಂಗ್ರೆಸ್ ನವರಿಗೆ ನೋವಾಗುತ್ತದೆ. ಯಾವುದೇ ಹಿಂದು ನಾಯಕ ಇತಿಹಾಸ ಹೇಳುವ ಹಾಗಿಲ್ಲ. ದೇಶ ತುಂಡು ಮಾಡಿದ್ದು ಕಾಂಗ್ರೆಸ್ ಅಂದರೆ ಅದು ದ್ವೇಷ ಅನ್ನಿಸುತ್ತದೆ. ಹೀಗಾದರೆಅವರು ದೇಶ ದ್ರೋಹಿಗಳು ಎಂದು ಕಿಡಿಕಾರಿದರು.
ನಮಗೆ ಯಾವುದೇ ಭಯ ಇಲ್ಲ, ನಾವು ಸತ್ಯ ಹೇಳುತ್ತೇವೆ. ಭಯೋತ್ಪಾದನೆ ಮಾಡುವವರು ಮುಸ್ಲಿಮರು ಎಂದರೆ ಕಾಂಗ್ರೆಸ್‌ಗೆ ನೋವಾಗುತ್ತದೆ. ಮುಸ್ಲಿಮರು ಎಲ್ಲರೂ ಭಯೋತ್ಪಾದಕರು ಅಲ್ಲ ಎಂದರೂ ಉರಿ ಬೀಳು ತ್ತದೆ. ಕಾಯಿದೆ ಯಿಂದ ಪತ್ರಿಕಾ ಸ್ವಾತಂತ್ರ್ಯ ಹರಣ ಆಗುತ್ತದೆ. ಇಂದಿರಾಗಾಂಧಿ ಇದೇ ಮಾಡಿದ್ದು ಸಂವಿಧಾನ ಕೊಲೆ ಮಾಡು ತ್ತಿರು ವುದು ಕಾಂಗ್ರೆಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶ ಭಕ್ತಿ ಜಾಗೃತಿ ಪುಸ್ತಕ ಬರೆದರೆ ಈ ಕಾಯಿದೆ ಮೂಲಕ ನಿಷೇಧ ಮಾಡಬಹುದು. ಬಾಬರ್ ದೇಶ ನಿರ್ನಾಮ ಮಾಡಿದ ಅಂದರೆ ಕಾಂಗ್ರೆಸ್‌ಗೆ ಸಿಟ್ಟು ಬರುತ್ತದೆ. ಸತ್ಯ ಹೇಳಲು ಆಗದ ನಿರ್ವೀಯ್ರರು ಕಾಂಗ್ರೆಸ್‌ನವರು. ತುರ್ತುಸ್ಥಿತಿ ಹೇರಿದಾಗಲೇ ದೇಶದ ಜನ ಬಗ್ಗಲಿಲ್ಲ. ಇಂತಹ ಮಸೂದೆ ತಂದರೆ ಹೆದರಲ್ಲ, ಹಿಂದುಗಳನ್ನು ಕಟ್ಟಿ ಹಾಕಲು ಯಾವ ಮಸೂದೆ ಇಲ್ಲ. ಕಾನೂನು ಕಟ್ಟಳೆಗಳಿಂದ ಹಿಂದೂ ಸಮಾಜ ಕಟ್ಟಿ ಹಾಕಲು ಆಗಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಮಾತನಾಡಿ,ಸಿದ್ದರಾಮಯ್ಯ ಡೋಂಗಿ ರಾಜಕಾರಣ, ಇಂದಿರಾಗಾಂಧಿ ಮೀರಿಸಲು ಪ್ರಯತ್ನವಾಗಿ ಇಂತಹ ವಿಧೇಯಕ ತಂದಿದ್ದಾರೆ ಎಂದರು. ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ದೀನದಯಾಳು, ಮಾಲತೇಶ್, ಸುರೇಶ್, ನಾಗರಾಜ್, ಅಶೋಕ ನಾಯ್ಕ, ಜ್ಞಾನೇಶ್ವರ, ಮಂಜುನಾಥ್, ಸುರೇಖಾ ಮುರುಳೀಧರ, ಚಂದ್ರಶೇಖರ್, ತಮ್ಮಡಿಹಳ್ಳಿ ನಾಗರಾಜ್, ಇದ್ದರು. ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.















Leave a Reply