ಶಿವಮೊಗ್ಗ : ವಿದ್ಯಾನಗರದಲ್ಲಿ ನಿರ್ಮಿಸಲಾದ 10 ಕಿಲೋವಾಟ್ FM ಟ್ರಾನ್ಸ್‌ಮಿಟ್ಟರ್ ಕೇಂದ್ರ ಇದೀಗ ಸಂಪೂರ್ಣ ಸಿದ್ಧವಾಗಿದೆ. ಈ ಸೌಲಭ್ಯದಿಂದ ಆಕಾಶವಾಣಿ ಭದ್ರಾವತಿ ಪ್ರಸಾರ ವ್ಯಾಪ್ತಿ ಬಹಳಷ್ಟು ವಿಸ್ತರಿಸಿ, ಗ್ರಾಮೀಣ ಹಾಗೂ ನಗರ ಪ್ರದೇಶದ ಲಕ್ಷಾಂತರ ಜನರಿಗೆ ಸ್ಪಷ್ಟ ಹಾಗೂ ಪರಿಣಾಮಕಾರಿ ಮಾಹಿತಿಯ ಪ್ರಸಾರ ಸಾಧ್ಯವಾಗಲಿದೆ.
ಮಾನ್ಯ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಶ್ರೀ ಎಲ್. ಮುರುಗನ್ ಜಿ ಅವರ ಸಹಕಾರದಿಂದ ಈ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಫೆಬ್ರವರಿ 2026ರಲ್ಲಿ ಈ ಕೇಂದ್ರವನ್ನು ಉದ್ಘಾಟಿಸಲು ಸಂಸದ ಬಿ ವೈ ರಾಘವೇಂದ್ರ ಆಹ್ವಾನಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ದೂರದರ್ಶಿ ನಾಯಕತ್ವದಲ್ಲಿ, ದೇಶದ ಸಮಗ್ರ ಅಭಿವೃದ್ಧಿ ಮತ್ತು ಸಂಪರ್ಕ ವ್ಯವಸ್ಥೆಯ ಬಲವರ್ಧನೆಗೆ ಕೇಂದ್ರ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸದ ರಾಘವೇಂದ್ರ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಜನತೆಗೆ ಖುಷಿ ಸುದ್ದಿ – ಆಕಾಶವಾಣಿಯ ಬಲ ಹೆಚ್ಚಿಸಿದ ಕೇಂದ್ರ












Leave a Reply