ಸಾಗರ ಕ್ಷೇತ್ರದ ಇತಿಹಾಸದಲ್ಲಿ  232 ಕಾಲು ಸಂಕ ನಿರ್ಮಾಣಕ್ಕೆ ಅನುದಾನ ! : ಶಾಸಕ ಬೇಳೂರು ಗೋಪಾಲಕೃಷ್ಣ

IMG 20260212 WA0007 ಸಾಗರ ಕ್ಷೇತ್ರದ ಇತಿಹಾಸದಲ್ಲಿ  232 ಕಾಲು ಸಂಕ ನಿರ್ಮಾಣಕ್ಕೆ ಅನುದಾನ ! : ಶಾಸಕ ಬೇಳೂರು ಗೋಪಾಲಕೃಷ್ಣ<br>
Spread the love

ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ

ರಿಪ್ಪನ್‌ಪೇಟೆ: ಸಾಮಾನ್ಯ ವರ್ಗಕ್ಕೆ ಗಟ್ಟಿಯಾಗಿ ನಿಲ್ಲುವಂತೆ ಮಾಡುವಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಯ ಮೂಲಕ ಬಡಕುಟುಂಬಕ್ಕೆ ಅಧಾರ ಸ್ತಂಭವಾಗಿದೆ ಎಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

  ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿಯಲ್ಲಿ  1.20 ಕೋಟಿ ರೂಪಾಯಿ ವೆಚ್ಚದ 2.5  ಕಿ.ಮಿ ರಿಂದ 4.9 ಕಿ.ಮೀಟರ್ ರಸ್ತೆ ಅಚಾಪುರ ಜಿಲ್ಲಾ ಮುಖ್ಯರಸ್ತೆಯಿಂದ ಸಿದ್ದಪ್ಪನಗುಡಿಯ ಸಂಪರ್ಕರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಸಾಮಾನ್ಯ ಜನರು ಅಭಿವೃದ್ದಿ ಹೊಂದಬೇಕು ರಸ್ತೆ ಅಭಿವೃದ್ದಿ ಮಾಡುವುದು ಕೆಂಚನಾಲದಲ್ಲಿ ಒಂದೇ ಅಲ್ಲ ನನ್ನ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಂಪರ್ಕ ರಸ್ತೆಗಳಿಗೆ ಅನುದಾನವನ್ನು ನೀಡಿರುವುದಾಗಿ ಹೇಳಿದ ಅವರು ರಾಜ್ಯ ಸರ್ಕಾರ ಸಾಗರ ಕ್ಷೇತ್ರಕ್ಕೆ 232 ಕಾಲಸಂಕ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದು ಇತಿಹಾಸದಲ್ಲಿ ಯಾರು ಇಷ್ಟು ಕಾಲಸಂಕಕ್ಕೆ ಅನುಧಾನ ತಂದಿಲ್ಲ ಎಂದ ಅವರು ಈ ಭಾಗದಲ್ಲಿ ಶಕ್ತಿ ಯೋಜನೆಯಡಿ ಎರಡು ಮೂರು ಬಸ್ ಬಿಡುವ ಬಗ್ಗೆ ಚಿಂತನೆ ನಡೆಸಿದ್ದು ಗ್ಯಾರಂಟಿ ಯೋಜನೆಯಿಂದಾಗಿ ಪ್ರತಿಯೊಂದು ಬಡ ಕುಟುಂಬಗಳ ಅರ್ಥಿಕವಾಗಿ ಮೇಲೆ ಬರುವಂತೆ ಮಾಡಿದೆ.ಇದರಿಂದಾಗಿ ಬಡವರು ಹಿಂದುಳಿದವರು ಅಶೋತ್ತರವನ್ನು ಪರಿಹರಿಸಲು ಸಹಕಾರಿಯಾಗಿದೆ ಉಳಿದಂತೆ ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಈಗಾಗಲೇ 8 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡಿರುವುದಾಗಿ ತಿಳಿಸಿ ಮಾರಿಕಾಂಬ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ ಹಾಗೂ ಮಹಾದ್ವಾರ ಸೇರಿದಂತೆ ಒಳಚರಂಡಿ ಸರ್ಕಲ್ ಅಗಲೀಕರಣಕ್ಕೆ ಸಾರ್ವಜನಿಕರು ಸಹಕಾರಿಸಿವಂತೆ ಸೂಚಿಸಿದ ಅವರು ಸರ್ಕಾರ ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 54 ಸಾವಿರ ಕೋಟಿ ರೂ ವ್ಯಯ ಮಾಡುತ್ತಿದ್ದು ಈ ಸೌಲಭ್ಯಗಳು ಸಮರ್ಪಕವಾಗಿ ಫಲಾನುಭವಿಗಳನ್ನು ತಲುಪುವಂತಾಗದೆ ಎಂದರು.

ಗುತ್ತಿಗೆದಾರ ಗುರುಪ್ರಸಾದ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿದರು.

ಕೆಂಚನಾಲ ಗ್ರಾಮ ಪಂಚಾಯಿತ್ ಅಧ್ಯಕ್ಷ ಮಹಮದ್ ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಪುಟ್ಟಮ್ಮ ಗ್ರಾಮ ಪಂಚಾಯ್ತಿ ಸದಸ್ಯರಾದ ಪರಮೇಶ,ರಮ್ಯಪುಟ್ಟಮ್ಮ ಗೌರಮ್ಮ,ಉಷಾ ಹಾಗೂ ಮಂಜುನಾಥ. ಪಂಚಾಯಿತ್ ಆಭಿವೃದ್ದಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ಲೋಕೋಪಯೋಗಿ ಇಲಾಖೆ ಎಇಇ ಸಂತೋಷ, ಜೆಇ ಸಿಂಧು  ಇನ್ನಿತರರು ಹಾಜರಿದ್ದರು.


Spread the love

Leave a Reply

Your email address will not be published. Required fields are marked *