ಮಾಜಿ ಸಚಿವ ಹೆಚ್.ಹಾಲಪ್ಪ ಅವರಿಂದ ಕಾರ್ಯಕರ್ತರ ಮನೆ ಭೇಟಿ
ರಿಪ್ಪನ್ ಪೇಟೆ :ಬಿಜೆಪಿ ಹೊಸನಗರ ಮಂಡಲದ ವತಿಯಿಂದ ಜನವರಿ 17ರಂದು ನಡೆಯಲಿರುವ ಬೃಹತ್ ಪ್ರತಿಭಟನೆಯ ಅಂಗವಾಗಿ ಇಂದು (12-01-26) ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹೆಚ್. ಹಾಲಪ್ಪ ಅವರು ಹೊಸನಗರ ತಾಲೂಕಿನ ಕೊಳವಂಕ ಬೂತ್ ಕಾರ್ಯದರ್ಶಿ ನಾರಾಯಣಪ್ಪ ಅವರ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.ಸಭೆಯಲ್ಲಿ ಪ್ರತಿಭಟನೆಯ ಉದ್ದೇಶ, ಸಂಘಟನೆ ಬಲಪಡಿಸುವುದು ಹಾಗೂ ಕಾರ್ಯಕರ್ತರ ಪಾತ್ರ ಕುರಿತು ಚರ್ಚೆ ನಡೆಸಲಾಯಿತು. ಪಕ್ಷದ ಕಾರ್ಯಕರ್ತರು ಒಂದೇ ಮನೋಭಾವದಿಂದ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಹಾಲಪ್ಪ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಹೊಸನಗರ ಮಂಡಲದ ಪ್ರಭಾರಿಯಾದ ಪದ್ಮಿನಿ ರಾವ್, ಸಹ ಪ್ರಭಾರಿ ಮಹೇಶ್ ವಿ, ಆರ್.ಟಿ. ಗೋಪಾಲ್, ಸ್ಥಳೀಯ ಮುಖಂಡರಾದ ಮ್ಯಾಮ್ ಕೋಸ್ ನಿರ್ದೇಶಕರಾದ ಧರ್ಮೇಂದ್ರ ಹೆಚ್, ಯೋಗೇಂದ್ರಣ್ಣ , ದೇವೇಂದ್ರಣ್ಣ ಸೇರಿದಂತೆ ಅನೇಕ ಮುಖಂಡರು, ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.















Leave a Reply