ಯಶಸ್ಸು ಎಂದರೆ ದೊಡ್ಡ ನಗರ, ದೊಡ್ಡ ಕಂಪನಿ, ದೊಡ್ಡ ಹುದ್ದೆ ಮಾತ್ರವಲ್ಲ. ಹಳ್ಳಿಯಲ್ಲೇ ಸ್ವಂತ ಅಂಗಡಿ, ಸ್ವಂತ ತೋಟ, ಸ್ವಂತ ಉತ್ಪನ್ನ, ಸ್ವಂತ ಬ್ರಾಂಡ್ ನಿರ್ಮಿಸುವುದೂ ದೊಡ್ಡ ಸಾಧನೆಯೇ. ನಿಮ್ಮ ಪರಿಶ್ರಮದಿಂದ ನಿಮ್ಮ ಕುಟುಂಬಕ್ಕೆ ಗೌರವಯುತ ಜೀವನ ಕೊಡುವುದು, ನಿಮ್ಮ ಹಳ್ಳಿಗೆ ಅಭಿವೃದ್ಧಿಯ ಬೆಳಕು ತರುವುದು ನಿಜವಾದ ಯಶಸ್ಸು. ಮಲೆನಾಡು ಭಾಗದ ಯುವಕರಿಗಾಗಿ ಒಂದು ಬಿಸಿನೆಸ್ ಚಿಂತನೆಯೊಂದಿಗೆ ನಿಮ್ಮ ಮುಂದೆ.
ಟೀ ಅಂಗಡಿ ಫ್ರಾಂಚೈಸ್ – ಗ್ರಾಮೀಣ ಪ್ರದೇಶಕ್ಕೆ ಸೂಕ್ತವಾದ ಸ್ಥಿರ ಆದಾಯದ ವ್ಯವಹಾರ.ಭಾರತದಲ್ಲಿ ಚಹಾ (ಟೀ) ಕೇವಲ ಪಾನೀಯವಲ್ಲ, ಅದು ದಿನನಿತ್ಯದ ಬದುಕಿನ ಭಾಗ. ಹಳ್ಳಿಯಿಂದ ಮಹಾನಗರದವರೆಗೆ ಬೆಳಗ್ಗೆ ಶುರುವಾಗುವುದು ಟೀಯಿಂದಲೇ. ಈ ಕಾರಣದಿಂದ ಟೀ ಅಂಗಡಿಗೆ ಎಂದಿಗೂ ಬೇಡಿಕೆ ಕಡಿಮೆಯಾಗುವುದಿಲ್ಲ. ಇಂತಹ ಸ್ಥಿರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಅನೇಕರು ಟೀ ಅಂಗಡಿ ಫ್ರಾಂಚೈಸ್ ಮೂಲಕ ಸ್ವಂತ ಉದ್ಯಮ ಆರಂಭಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಈಗಾಗಲೇ ಟೀ- ಅನೇಕ ಹೋಟೆಲ್ ಗಳಲ್ಲಿ ಸಿಗುತ್ತಿರಬಹುದು ಆದರೆ ಚಹಾದಲ್ಲೆ ವಿವಿಧ ರೀತಿಯ ಬಗೆ ಬಗೆಯ ಚಹಾ ಸಿಗುತ್ತಿಲ್ಲ ಎಂಬುಂದು ಗಮನಾರ್ಹ ಹಾಗೂ ಚಹಾ ಕುಡಿಯುವ ಜನರು ಇಷ್ಟ ಪಡುವ ವಿಭಿನ್ನ comfort ಸಿಗಬೇಕು ಹಾಗೇ ಚಹಾ ಜೊತೆಗೆ ಬಗೆ ಬಗೆ ಬಿಸ್ಕೆಟ್ ಇದ್ದರೆ ಗ್ರಾಹಕರು ಇಷ್ಟ ಪಡುತ್ತಾರೆ.

ಟೀ ಅಂಗಡಿ ಫ್ರಾಂಚೈಸ್ ಎಂದರೆ ಈಗಾಗಲೇ ಪ್ರಸಿದ್ಧವಾಗಿರುವ ಒಂದು ಬ್ರಾಂಡ್ನ ಹೆಸರಿನಲ್ಲಿ, ಅವರ ಮಾರ್ಗದರ್ಶನ, ಗುಣಮಟ್ಟದ ನಿಯಮಗಳು ಮತ್ತು ತಯಾರಿಕೆ ವಿಧಾನಗಳೊಂದಿಗೆ ಅಂಗಡಿ ಆರಂಭಿಸುವುದು. ಇದರಿಂದ ಹೊಸಬರಿಗೆ ಬಿಸಿನೆಸ್ ಮಾಡುವ ಅಪಾಯ ಕಡಿಮೆಯಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಈ ಮಾದರಿ ಹೆಚ್ಚು ಯಶಸ್ವಿಯಾಗುತ್ತಿದೆ.
ಹೂಡಿಕೆ ವಿವರ (ಅಂದಾಜು)
ಫ್ರಾಂಚೈಸ್ ಫೀ ₹2 – 6 ಲಕ್ಷ
ಅಂಗಡಿ ಜಾಗ
100 – 300 ಚ.ಅಡಿ ಸಾಕು,ಬಸ್ ಸ್ಟ್ಯಾಂಡ್, ಕಾಲೇಜು, ಆಸ್ಪತ್ರೆ, ಮಾರುಕಟ್ಟೆ ಬಳಿ ಉತ್ತಮ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಬದಿ ಕೂಡ ಸೂಕ್ತ.
☕ ಮಾರಾಟವಾಗುವ ವಸ್ತುಗಳು
ಟೀ (ಮಸಾಲಾ, ಜಿಂಜರ್, ಲೆಮನ್),ಕಾಫಿ,ಬನ್, ಬಿಸ್ಕೆಟ್,ಸ್ನ್ಯಾಕ್ಸ್ (ಪಕೋಡಾ, ಮ್ಯಾಗಿ, ಸಮೋಸಾ)
ಲಾಭ (ಸರಾಸರಿ)
ದಿನಕ್ಕೆ 100–300 ಕಪ್ ಮಾರಾಟ,ಪ್ರತಿ ಕಪ್ ಲಾಭ: ₹6 – ₹10,ತಿಂಗಳ ಲಾಭ: ₹25,000 – ₹40,000+. (ಸ್ಥಳ ಮತ್ತು ಮಾರಾಟದ ಮೇಲೆ ಅವಲಂಬಿತ)
ಫ್ರಾಂಚೈಸ್ ಲಾಭಗಳು
1.ರೆಡಿ ಬ್ರಾಂಡ್ ಹೆಸರು 2.ತರಬೇತಿ & ಮಾರ್ಕೆಟಿಂಗ್ ಸಹಾಯ 3.ರೆಸಿಪಿ & ಗುಣಮಟ್ಟ ನಿಯಂತ್ರಣ 4.ಹೊಸಬರಿಗೆ ಸುಲಭ.
⚠️ ಗಮನಿಸಬೇಕಾದವು
1.ಗ್ರಾಮೀಣ ಪ್ರದೇಶಕ್ಕೆ ಹೈ-ಫೀ ಫ್ರಾಂಚೈಸ್ ಬೇಡ.2.ಸ್ಥಳೀಯ ಜನರ ರುಚಿಗೆ ತಕ್ಕ ಮೆನು ಇರಲಿ. 3.ಬಾಡಿಗೆ ಕಡಿಮೆ ಇರುವ ಜಾಗ ಆಯ್ಕೆ ಮಾಡಿ.
☕ ಪರ್ಯಾಯ: ಸ್ವಂತ ಟೀ ಬ್ರಾಂಡ್
1.ಕಡಿಮೆ ಹೂಡಿಕೆ (₹50,000 – ₹1.5 ಲಕ್ಷ)
2. “ಮಲೆನಾಡು ಟೀ”, “ಗ್ರಾಮ ಚಹಾ” ಎಂಬ ಸ್ಥಳೀಯ ಬ್ರಾಂಡ್
ಲಾಭ ಶೇಕಡಾ ಹೆಚ್ಚು.
ಓದುಗ ಮಿತ್ರರೇ – ಇದು ಕೇವಲ ನಿಮ್ಮ ಮಾಹಿತಿಗಾಗಿ ನೀಡಿದ ಬಿಸಿನೆಸ್ ನ್ಯೂಸ್ ಆಗಿದೆ.. ನಾವು ಯಾರಿಗೂ ಆರ್ಥಿಕ ಸಲಹೆ ನೀಡುತ್ತಿಲ್ಲ. ನೀವು ಇಡುವ ಹೆಜ್ಜೆಯನ್ನು ಯೋಜಿಸಿ ಮುಂದಕ್ಕಿಡಿ. ನಾವು ಜವಬ್ದಾರರಲ್ಲ.











Leave a Reply