ರಿಪ್ಪನ್ ಪೇಟೆ:ಭಾರತೀಯ ಜನತಾ ಪಾರ್ಟಿ ಹೊಸನಗರ ಮಂಡಲದ ಆಶ್ರಯದಲ್ಲಿ, ಕೆರೆಹಳ್ಳಿ ಹಾಗೂ ಹುಂಚ ಮಹಾ ಶಕ್ತಿ ಕೇಂದ್ರಗಳ ಸಂಯುಕ್ತ ಆಯೋಜನೆಯಲ್ಲಿ ನಮ್ಮ ಹೆಮ್ಮೆಯ ಮಾಜಿ ಪ್ರಧಾನಿ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ವರ್ಷಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ದಿನಾಂಕ 25.12.2025ರ ಸಂಜೆ 6.00 ಗಂಟೆಗೆ ರಿಪ್ಪನ್ ಪೇಟೆಯ ಶ್ರೀ ರಾಮ ಮಂದಿರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ
ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಆರ್.ಕೆ. ಸಿದ್ದರಾಮಣ್ಣರವರು,ಮಾಜಿ ಸಚಿವ ಶ್ರೀ ಹರತಾಳು ಹಾಲಪ್ಪರವರು,ಮಾಜಿ ಗೃಹ ಸಚಿವ,ಹಾಲಿ ಶಾಸಕರು ಶ್ರೀ ಆರಗ ಜ್ಞಾನೇಂದ್ರರವರು ಪಾಲ್ಗೊಳ್ಳಲಿದ್ದು, ಜೊತೆಗೆ ಜಿಲ್ಲಾ, ಮಂಡಲ,ಮಹಾ ಶಕ್ತಿ ಕೇಂದ್ರಸ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಅಟಲ್ ಜೀ ಅವರು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಪಾರ ಕೊಡುಗೆ, ಅವರ ಆದರ್ಶಗಳು ಹಾಗೂ ರಾಜಕೀಯ ಜೀವನದ ಸ್ಮರಣೆ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಅಟಲ್ ಜೀ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಿಜೆಪಿ ಹೊಸನಗರ ಮಂಡಲ ವತಿಯಿಂದ ಮನವಿ ಮಾಡಿಕೊಳ್ಳಲಾಗಿದೆ.















Leave a Reply