ಅಟಲ್ ಜಿ 101 ನೇ ಜನ್ಮ ದಿನಾಚರಣೆ ಕಾರ್ಯಕ್ರಮ
ರಿಪ್ಪನ್ ಪೇಟೆ: ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ರಾಜಕೀಯ ಇತಿಹಾಸದಲ್ಲಿ ಕೇವಲ ಒಬ್ಬ ಪ್ರಧಾನಮಂತ್ರಿಯಾಗಿ ಮಾತ್ರವಲ್ಲದೆ, ಒಬ್ಬ ಶ್ರೇಷ್ಠ ಸಂಸದೀಯ ಪಟು, ವಾಗ್ನಿ, ಕವಿ ಮತ್ತು ಮುತ್ಸದ್ದಿಯಾಗಿ ಅಳಿಸಲಾಗದ ಛಾಪನ್ನು ಮೂಡಿಸಿದವರು. ದಶಕಗಳ ಕಾಲ ಭಾರತದ ರಾಜಕೀಯವು ಏಕಪಕ್ಷೀಯ ಪ್ರಭುತ್ವದಿಂದ ಬಹುಪಕ್ಷೀಯ ಒಕ್ಕೂಟ ವ್ಯವಸ್ಥೆಗೆ ಬದಲಾದ ಸಂದರ್ಭದಲ್ಲಿ, ವಾಜಪೇಯಿ ಅವರು ಆ ಬದಲಾವಣೆಯ ನಾಯಕತ್ವವನ್ನು ವಹಿಸಿದ್ದರು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ ಸಿದ್ದರಾಮಣ್ಣ ಹೇಳಿದರು.
ಪಟ್ಟಣದ ಸಾಗರ ರಸ್ತೆಯಲ್ಲಿರುವ ಶ್ರೀ ರಾಮಮಂದಿರದಲ್ಲಿ ಮಾಜಿ ಪ್ರಧಾನಿ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ವರ್ಷಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹೊಸನಗರ ಮಂಡಲದ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಆರ್.ಕೆ ಸಿದ್ದರಾಮಣ್ಣ ಅಟಲ್ ಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ತದನಂತರ ಮಾತನಾಡಿದ ಹಿರಿಯ ಕಾರ್ಯಕರ್ತರಾದ ಆರ್.ಟಿ ಗೋಪಾಲ್ ಅಟಲ್ ಜಿ ಅಜಾತಶತ್ರು ,ಯಾರು ಅವರನ್ನು ದ್ವೇಶಿಸುವವರೇ ಇರಲಿಲ್ಲ ಅಂತಹ ವ್ಯಕ್ತಿತ್ವ ಅವರದ್ದು ಅವರಂಥ ನಿಸ್ವಾರ್ಥ ಕಾರ್ಯಕರ್ತ ರಿಂದ ಬಿಜೆಪಿ ಇಂದು ಅಧಿಕಾರಕ್ಕೆ ಬಂದಿದೆ. ನಾನಿಂದು ನನ್ನ ವಾಟ್ಸಾಪ್ ತೆಗೆದು ನೋಡಿದಾಗ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಅಟಲ್ ಜೀ ಅವರ ಭಾವಚಿತ್ರವನ್ನು ಹಾಕಿಕೊಂಡಿದ್ದು ನೋಡಿ ಸಂತಸವಾಯ್ತು. ಹಣವಿಲ್ಲದ ಕಾಲದಲ್ಲಿ ಅಟಲ್ ಜಿ ಉಪವಾಸವಿದ್ದು ಸಂಘಟಿಸಿ ಕೆಲಸ ಮಾಡಿದ್ದರು ಅವರು ನಮಗೆ ಪ್ರೇರಣೆಯಾಗಲಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಾಜಿ ತಾಲೂಕು ಅಧ್ಯಕ್ಷರಾದ ಬೆಳ್ಳೂರು ತಿಮ್ಮಣ್ಣ,ಗಣಪತಿ ಬೆಳಗೋಡು,ಸಂಘದ ಪ್ರಮುಖರಾದ ಶ್ಯಾಮಸುಂದರ,ಎನ್ ಸತೀಶ್ ಇದ್ದರು ಮಂಜು ಆಚಾರ್ ಹಾಡಿದರು, ನಾಗರತ್ನ ದೇವರಾಜ್ ಪ್ರಾರ್ಥಿಸಿದರು, ನಾಗಾರ್ಜುನ ಸ್ವಾಮಿ ಸ್ವಾಗತಿಸಿ ,ವಂದಿಸಿದರು.
















Leave a Reply