RIPPANPETE :ಬಸವಾಪುರದಲ್ಲಿ ಕುಣುಬಿ ಜನಾಂಗದ ಹೋಳಿ ಸಂಭ್ರಮ,ಭಾರತದ ಸಾಂಸ್ಕೃತಿಕ ವೈಭವಕ್ಕೆ ಜೀವಂತ ಸಾಕ್ಷಿ

NAADI NEWS 20260302 203506 0000 RIPPANPETE :ಬಸವಾಪುರದಲ್ಲಿ ಕುಣುಬಿ ಜನಾಂಗದ ಹೋಳಿ ಸಂಭ್ರಮ,ಭಾರತದ ಸಾಂಸ್ಕೃತಿಕ ವೈಭವಕ್ಕೆ ಜೀವಂತ ಸಾಕ್ಷಿ
Spread the love

ರಿಪ್ಪನ್ ಪೇಟೆ: ಸಮೀಪದ ಹಾರೋಹಿತ್ಲು ಗ್ರಾಮದ ಬಸವಾಪುರದ ಕಂಚಿಕೆರೆ ಎರಮೂರ ಮನೆಯಲ್ಲಿ  ಪ್ರತಿ ವರ್ಷದ ಕುಣುಬಿ ಜನಾಂಗದ ಹೋಳಿ ಹಬ್ಬವು ಗ್ರಾಮೀಣ ಸಾಂಸ್ಕೃತಿಕ ವೈಭವದ ಪ್ರತಿರೂಪವಾಗಿ ವಿಜೃಂಭಣೆಯಿಂದ ನಡೆಯುತ್ತಿದೆ.
ಏಕಾದಶಿಯಿಂದಲೇ ಪ್ರಾರಂಭವಾಗುವ ಹಬ್ಬದ ಸಂಭ್ರಮವು ಹುಣ್ಣಿಮೆಯ ತನಕ ನಿರಂತರವಾಗಿ ಸಾಗುತ್ತದೆ. ಈ ಅವಧಿಯಲ್ಲಿ ಗ್ರಾಮಸ್ಥರು ಪರಂಪರೆಯ ವಿಧಿವಿಧಾನಗಳನ್ನು ಅನುಸರಿಸಿ, ಹೋಳಿ ಪೂಜೆ ಸಲ್ಲಿಸಿ ಹಬ್ಬದ ಆತ್ಮೀಯತೆಯನ್ನು ಉಳಿಸಿಕೊಳ್ಳುತ್ತಾರೆ.

img 20260301 wa00462193960489606789906 RIPPANPETE :ಬಸವಾಪುರದಲ್ಲಿ ಕುಣುಬಿ ಜನಾಂಗದ ಹೋಳಿ ಸಂಭ್ರಮ,ಭಾರತದ ಸಾಂಸ್ಕೃತಿಕ ವೈಭವಕ್ಕೆ ಜೀವಂತ ಸಾಕ್ಷಿ
ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ

ಹಬ್ಬದ ಪ್ರಮುಖ ಆಕರ್ಷಣೆಯಾಗಿ ಜನಪದ ಹಾಡುಗಳು ಮತ್ತು ಕುಣಿತಗಳು ಗಮನ ಸೆಳೆಯುತ್ತವೆ. ಕುಡುಬಿ ಸಮುದಾಯದ ಸಂಪ್ರದಾಯಬದ್ಧ ವೇಷಭೂಷಣಗಳನ್ನು ತೊಟ್ಟು ಯುವಕರು, ಹಿರಿಯರು ಸೇರಿ ವೃತ್ತ ರೂಪದಲ್ಲಿ ನೃತ್ಯಮಾಡಿ ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತಾರೆ. ತಾಳ – ಡೊಳ್ಳಿನ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಗ್ರಾಮಸ್ಥರ ಸಂಭ್ರಮ ಗ್ರಾಮೀಣ ಬದುಕಿನ ಸೌಂದರ್ಯವನ್ನು ಸಾರುತ್ತದೆ.

img 20260302 wa00181739284076987017182 RIPPANPETE :ಬಸವಾಪುರದಲ್ಲಿ ಕುಣುಬಿ ಜನಾಂಗದ ಹೋಳಿ ಸಂಭ್ರಮ,ಭಾರತದ ಸಾಂಸ್ಕೃತಿಕ ವೈಭವಕ್ಕೆ ಜೀವಂತ ಸಾಕ್ಷಿ
ಸಾಂಸ್ಕೃತಿಕ ವೇಷಭೂಷಣ ಧರಿಸಿ

ಮನೆಮನೆಗೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಪದ್ಧತಿ ಇಂದಿಗೂ ಜೀವಂತವಾಗಿದೆ. ಸಮೂಹ ಭೋಜನ, ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಬ್ಬವು ಸಮುದಾಯದ ಏಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ.ಗ್ರಾಮೀಣ ಪ್ರದೇಶದಲ್ಲಿ ಇಂತಹ ಹಬ್ಬಗಳ ಆಚರಣೆ ಭಾರತದ ಬಹುಮುಖ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುತ್ತಿದ್ದು, ಪರಂಪರೆ ಮತ್ತು ಆಧುನಿಕತೆಯ ನಡುವೆ ಸಮತೋಲನ ಸಾಧಿಸಿರುವ ಕುಡುಬಿ ಜನಾಂಗದ ಸಂಸ್ಕೃತಿಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


Spread the love

Leave a Reply

Your email address will not be published. Required fields are marked *