ಗವಟೂರು ಗ್ರಾಮದ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಕಡೆ ಪ್ರಯಾಣ
ರಿಪ್ಪನ್ ಪೇಟೆ: ಶ್ರದ್ಧಾ ಭಕ್ತಿಯಿಂದ ವ್ರತಾಚರಣೆ ಮಾಡಿದ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಯ ಕಡೆಗೆ ಪಯಣ.
ಪಟ್ಟಣದ ಸಮೀಪದ ಗವಟೂರಿನ ಹಳಿಯೂರು ಸಂಘದ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೆಂಡಾಲ್ ಇದ್ದು ಶ್ರದ್ಧಾ ಭಕ್ತಿ ಯಿಂದ ಮಾಲಾಧಾರಿಯಗಳು ಆ ಕ್ಷೇತ್ರದಲ್ಲಿ ವ್ರತಾಚರಣೆ, ಧಾರ್ಮಿಕ ಕಾರ್ಯಕ್ರಮ ,ಭಜನೆ ಮಾಡಿಕೊಂಡು ಬಂದಿರುತ್ತಾರೆ.
ನಿನ್ನೆ (ಜ.3) ರಂದು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಭಕ್ತಿಭಾವದ ಸಂಕೇತವಾದ ಇರುಮುಡಿ ಕಟ್ಟಿಕೊಂಡು ಶಬರಿಮಲೆ ಪಯಣ ಪ್ರಾರಂಭಿಸಿದ್ದಾರೆ. ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮದ ನಂತರ ಗ್ರಾಮಸ್ಥರೆಲ್ಲರೂ ಮಾಲಾಧಾರಿಗಳಿಗೆ ಬಿಳ್ಕೋಟ್ಟರು.

ಮಾಲಾಧಾರಿಗಳಾದ ಗುರು ಸ್ವಾಮಿಗಳಾದ ಹನುಮಂತ್ ಸ್ವಾಮಿ,ಮಂಜುನಾಥ್ ಸ್ವಾಮಿ ಸುಬ್ರಮಣ್ಯ ಸ್ವಾಮಿ,ಸುನಿಲ್ ಸ್ವಾಮಿ,ರಾಘು ಸ್ವಾಮಿ ಗುರುಮೂರ್ತಿ ಸ್ವಾಮಿ,ಸುಮಂತ್ ಸ್ವಾಮಿ, ಗೋಪಾಲ್ ಸ್ವಾಮಿ, ಯಶವಂತ ಸ್ವಾಮಿ,ಸಂತೋಷ ಸ್ವಾಮಿ, ಪ್ರಕಾಶ್ ಸ್ವಾಮಿ ,ನಿಶಾಂತ್ ಸ್ವಾಮಿ,ಮಹೇಶ್ ಸ್ವಾಮಿಗಳು ಶಬರಿಮಲೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಗ್ರಾಮಸ್ಥರೆಲ್ಲರೂ ಸುಖ ಪ್ರಯಾಣದ ಶುಭಕೋರಿ ಬೀಳ್ಕೊಟ್ಟರು.















Leave a Reply