1 ಕೋಟಿ ವೆಚ್ಚದ ಶಾಂತಪುರ -ಗರ್ತಿಕೆರೆ ಸಂಪರ್ಕ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ
ರಿಪ್ಪನ್ಪೇಟೆ: ಪಕ್ಷದ ತತ್ವಸಿದ್ದಾಂತದ ಮೇಲೆ ಬೆಳೆದು ಬಂದವನು ಎಂದಿಗೂ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಕೆಲಸ ಮಾಡುತ್ತಾನೆ ಅದರಿಂದ ಜನರಿಗೂ ಸಂತೋಷವಾಗುವುದರೊಂದಿಗೆ ಸಂಘಟನೆಗೂ ಪಕ್ಷಕ್ಕೂ ಲಾಭವಾಗುತ್ತದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸಮೀಪದ ಅಮೃತ-ಕೋಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಪುರ-ಗರ್ತಿಕೆರೆ ಸಂಪರ್ಕದ ರಸ್ತೆಗೆ ಪಿಎಂ.ಜಿ.ಎಸ್.ವೈ ಯೋಜನೆಯಡಿ 1 ಕೋಟಿ ರೂ ವೆಚ್ಚದ ಅನುದಾನವನ್ನು ಬಿಡುಗಡೆ ಮಾಡಿಸುವ ಮೂಲಕ ಸಂಪರ್ಕ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿ ಮಾತನಾಡಿದ ಅವರು ಎಂದಿಗೂ ನಾನು ಮತ ಕೊಡದವರು ಮತಕೊಟ್ಟವರು ಎಂಬ ಯಾವುದೇ ತಾರತಮ್ಯ ಮಾಡದೇ ಎಂದಿಗೂ ನಮ್ಮ ಕ್ಷೇತ್ರದ ಮತದಾರರು ನಮ್ಮವರು ಎಂದು ತಿಳಿದು ಕ್ಷೇತ್ರದಲ್ಲಿ ಹಂತಹಂತವಾಗಿ ಅಭಿವೃದ್ದಿ ಕಾರ್ಯಗಳನ್ನು ಮಾಡಿಕೊಂಡು ಬಂದವನು ಎಂದರು. ನಮ್ಮ ಪಕ್ಷ ರಾಜ್ಯದಲ್ಲಿ ಆಧಿಕಾರದಲ್ಲಿದ್ದಾಗ ನಾನು ಮಂತ್ರಿಯಾಗುತ್ತೇನೆಂಬ ಕನಸು ಕಂಡವನಲ್ಲ ಮಂತ್ರಿಯಾಗಿ ಚಿಕ್ಕಮಂಗಳೂರಿಗೆ ತೆರಳುವ ವೇಳೆಯಲ್ಲಿ ನನ್ನ ವಾಹನದ ಮುಂದೆ ಪೊಲೀಸ್ ಭದ್ರತಾ ವಾಹನ ಹೊರಟಾಗ ಶಬ್ದ ಮಾಡಬೇಡ ನಾನು ಸದಾ ಜನರ ಜೊತೆ ಬೆಳೆದು ಬಂದವನು ಅಧಿಕಾರ ಎಂದಿಗೂ ಶಾಶ್ವತವಲ್ಲ ನಮಗೆ ಮತದಾರರೇ ಶಾಶ್ವತ ಎಂದು ತಿಳಿದವನು ಎಂದು ಹೇಳಿದೆ ಅದೇ ರೀತಿಯಲ್ಲಿ ನಡೆದುಕೊಂಡೆ ಎಂದು ತಮ್ಮ ರಾಜ್ಯ ಗೃಹ ಸಚಿವನಾಗಿದ್ದಾಗಿನ ತಮ್ಮ ಅನುಭವದ ಮಾತುಗಳನ್ನು ಮೇಲಕುಹಾಕಿದ ಅವರು ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ವಹಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿ ಅದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಆದೇಶಿದರು.
ಕೋಡೂರು ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಪ್ರಕಾಶ ಶೆಟ್ಟರು.ಅಮೃತ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಸಚಿನಗೌಡ, ಸದಸ್ಯರಾದ ಲಿಂಗರಾಜು,ವಿಶುಗಂದ್ರಳ್ಳಿ, ಮಂಜುಳ,ದೇವರಾಜ್, ಸೋಮಣ್ಣ, ದಿನೇಶ್, ಆಪ್ತ ಸಹಾಯಕ ಬಸವರಾಜ್ ಮತ್ತು ಗ್ರಾಮಸ್ಥರು ಪಕ್ಷದ ಮುಖಂಡರು ಇನ್ನಿತರರು ಹಾಜರಿದ್ದರು.















Leave a Reply