ಅಡಿಕೆ ತೋಟದಲ್ಲಿ ವೃದ್ಧ ಮಹಿಳೆಗೆ ಹಾವು ಕಡಿತ ; ಚಿಕಿತ್ಸೆ ಫಲಕಾರಿಯಾಗದೆ ಸಾವು

NAADI NEWS 20260124 120508 0000 ಅಡಿಕೆ ತೋಟದಲ್ಲಿ ವೃದ್ಧ ಮಹಿಳೆಗೆ ಹಾವು ಕಡಿತ ; ಚಿಕಿತ್ಸೆ ಫಲಕಾರಿಯಾಗದೆ ಸಾವು
Spread the love

ಆನಂದಪುರ:ನಂದಪುರ ಹೋಬಳಿಯ ಬಳ್ಳಿಬೈಲು ಗ್ರಾಮದಲ್ಲಿ ಮಹಿಳೆಯೊಬ್ಬರು ಹಾವು ಕಚ್ಚಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಬಳ್ಳಿಬೈಲು ಗ್ರಾಮದ ಪುಟ್ಟಪ್ಪ ಅವರ ಪತ್ನಿ ಲಕ್ಷ್ಮಮ್ಮ (71) ಅವರು ಶುಕ್ರವಾರ ಬೆಳಿಗ್ಗೆ ಅಡಿಕೆ ತೋಟದಲ್ಲಿ ಕಳೆ ಸವರುತ್ತಿದ್ದ ವೇಳೆ ಹಾವು ಕಚ್ಚಿದೆ. ಇದರಿಂದ ಲಕ್ಷ್ಮಮ್ಮ ಅವರು ಅಸ್ವಸ್ಥರಾಗಿರುವುದನ್ನು ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರುಗಮನಿಸಿ, ತಕ್ಷಣ ಧಾವಿಸಿ ಬಂದು ಅವರನ್ನು ಚಿಕಿತ್ಸೆಗಾಗಿ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಮ್ಮ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *