ಹೊಸನಗರ: ತಾಲೂಕಿನ ಮಾವಿನಕಟ್ಟೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ತಡರಾತ್ರಿ (9 JAN ) ನಡೆದಿದೆ.

ಮೃತರನ್ನು ಚೇತನ್ ಮೊಗವೀರ (28)ಎಂದು ಗುರುತಿಸಲಾಗಿದ್ದು, ಅವರು ಉಡುಪಿ ನಗರದ ಬಟ್ಟೆ ಅಂಗಡಿಯೊಂದರಲ್ಲಿ ಉದ್ಯೋಗ ನಿರ್ವಹಿಸುತಿದ್ದರು. ನಿನ್ನೆ ರಾತ್ರಿ ಸುಮಾರು 8.45 ರಿಂದ 9.00 ಗಂಟೆ ನಡುವಿನ ಸಮಯದಲ್ಲಿ ಹೊಸನಗರದಿಂದ ತಮ್ಮ ಊರಾದ ಮಾವಿನಕಟ್ಟೆಗೆ ಎನ್ಎಸ್ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಾವಿನಕಟ್ಟೆ ಬಳಿ ರಸ್ತೆ ಮಧ್ಯಭಾಗದಲ್ಲಿ ಗುಂಡಿ ತೆಗೆಯಲಾಗಿದ್ದು, ಜೊತೆಗೆ ಮೋರಿ ಕಾಮಗಾರಿಗಾಗಿ ಜಲ್ಲಿ ಹಾಗೂ ಮರಳನ್ನು ರಸ್ತೆ ಬದಿಯಲ್ಲಿ ಹಾಕಲಾಗಿತ್ತು. ಆದರೆ, ಅಲ್ಲಿ ಯಾವುದೇ ಸೂಚನಾ ಫಲಕ ಅಥವಾ ಎಚ್ಚರಿಕೆ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಈ ಕಾರಣದಿಂದಾಗಿ ಬೈಕ್ ಸವಾರ ಚೇತನ್ ಮೊಗವೀರ ಅವರು ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚೇತನ್ ಮೊಗವೀರ ಅವರು ನಿನ್ನೆ ತಮ್ಮ ಊರಾದ ಮಾವಿನಕಟ್ಟೆಗೆ ಬಂದಿದ್ದರು. ಆದರೆ ಈ ದಿನ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬದವರಿಗೆ ತುಂಬಲಾರದ ನಷ್ಟ ಉಂಟಾಗಿದೆ.
ಘಟನಾ ಸ್ಥಳಕ್ಕೆ ಹೊಸನಗರ ವೃತ್ತ ನಿರೀಕ್ಷಕ ಗೌಡಪ್ಪ ಗೌಡರ್ ಹಾಗೂ ಉಪ ನಿರೀಕ್ಷಕ ಶಂಕರ್ ಗೌಡ ಪಾಟೀಲ್ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮೃತರಿಗೆ ಒಬ್ಬ ತಮ್ಮ ಹಾಗೂ ಒಬ್ಬ ತಂಗಿ ಇದ್ದು, ಅವರ ಅಕಾಲಿಕ ನಿಧನದಿಂದ ಕುಟುಂಬ ಹಾಗೂ ಗ್ರಾಮದಲ್ಲಿ ದುಃಖ ಆವರಿಸಿದೆ.













Leave a Reply