ರಿಪ್ಪನ್ ಪೇಟೆ: ಪಟ್ಟಣದ ಶ್ರೀರಾಮಮಂದಿರದಲ್ಲಿ ಭಾನುವಾರ ನಡೆದ ತಾಲೂಕು ಅಭ್ಯಾಸ ವರ್ಗ ಮತ್ತು ವಿನಾಯಕಪೇಟೆ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮ ನೇರವೇರಿತು.
ಉದ್ಘಾಟನೆ ನಂತರ ಶಿವಮೊಗ್ಗ ವಿಭಾಗ ಸಂಚಾಲಕ ರವಿ ಇರೋಜಿ ಮಾತನಾಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನ ಸಂಘಟಿಸಿ , ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ಜೋಡಿಸಿಕೊಂಡು ಕೊಂಡೊಯ್ಯವುದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯ ಅದರೊಂದಿಗೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ಗಟ್ಟಿ ಧ್ವನಿಯಾಗಿ ಪರಿಷತ್ತು ಮುಂದಾಳತ್ವ ವಹಿಸಲಿದೆ.
ಅಭ್ಯಾಸ ವರ್ಗದಲ್ಲಿ ಹೊಸನಗರ ತಾಲೂಕು ಸಂಚಾಲಕರಾಗಿ ನಮ್ರತಾ , ಸಹ ಸಂಚಾಲಕರಾಗಿ ರಾಹುಲ್ , ವಿನಾಯಕಪೇಟೆ ನಗರ ಕಾರ್ಯದರ್ಶಿಯಾಗಿ ಸ್ನೇಹಾ ,ಸಹ ಕಾರ್ಯದರ್ಶಿಯಾಗಿ ಅನಿಲ ಮತ್ತು ಸಹನಾ ನೂತನ 2025-26ನೇ ಸಾಲಿನ ಕಾರ್ಯಕಾರಿಣಿ ಜವಾಬ್ದಾರಿಗಳು ಘೋಷಣೆಗೊಂಡವು.
ತದನಂತರ ಮಾತನಾಡಿದ ಎಬಿವಿಪಿ ತಾಲೂಕು ಸಂಚಾಲಕಿ ನಮ್ರತಾ ಸೇವಾ ,ಸಂಸ್ಕಾರ ,ಓದಿನೊಂದಿಗೆ ವಿದ್ಯಾರ್ಥಿಗಳಿಗಾಗಿ ಸಂಘರ್ಷ ಇದು ಎಬಿವಿಪಿಯ ತತ್ವಗಳು ತಾಲೂಕಿನಲ್ಲಿ ವಿದ್ಯಾರ್ಥಿಗಳನ್ನು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ಕಾರ್ಯ ಪರಿಷತ್ತು ಇನ್ನಷ್ಟು ಪ್ರಖರವಾಗಿ ಮಾಡಲಿದೆ.
ನಗರ ಕಾರ್ಯದರ್ಶಿ ಸ್ನೇಹಾ ಮಾತನಾಡಿ ಮುಂದಿನ ದಿನಗಳಲ್ಲಿ ರಿಪ್ಪನ್ ಪೇಟೆ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿ ,ಯಾವುದೇ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಹೋರಾಟಗಳ ಮೂಲಕ ಸಂಬಂಧಪಟ್ಟವರ ಗಮನ ಸೆಳೆದು ಪರಿಹರಿಸುತ್ತೆವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆದಿತ್ಯ ಶೆಟ್ಟಿ, ತಾಲೂಕು ಸಹ ಸಂಚಾಲಕ ರಾಹುಲ್ ,ನಗರ ಸಹಕಾರ್ಯದರ್ಶಿ ಅನಿಲ ,ಸಹನಾ, ನಿಖಿಲ್ , ಸುನೀಲ್ ,ಅಂಜನ್ ,ಹಿರಿಯ ಕಾರ್ಯಕರ್ತರಾದ ಮದನ್, ಸೇರಿದಂತೆ ಅನೇಕರಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೂತನ ಶಾಖೆ ಉದ್ಘಾಟನೆ















Leave a Reply