ರಿಪ್ಪನ್ ಪೇಟೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೊಸನಗರ ತಾಲೂಕಿನ ಅಭ್ಯಾಸ ವರ್ಗವು ರಿಪ್ಪನ್ ಪೇಟೆಯ ಶ್ರೀರಾಮಮಂದಿರಲ್ಲಿ ಬೆಳಿಗ್ಗೆ 9:30ಕ್ಕೆ ನಡೆಯಲಿದ್ದು ಹೊಸನಗರ ತಾಲೂಕಿನ ಎಲ್ಲಾ ಶಾಖೆಗಳ ನೂತನ ಜವಾಬ್ದಾರಿ ಘೋಷಣೆಗಳು ನಡೆಯಲಿದೆ ಮತ್ತು ವಿನಾಯಕಪೇಟೆ ಶಾಖೆ ಉದ್ಘಾಟನೆಗೊಳ್ಳಲಿದೆ.

ಎಲ್ಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಾಳೆಯ ಅಭ್ಯಾಸ ವರ್ಗ ಮತ್ತು ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಬಿವಿಪಿ ವಿನಂತಿಸಿದೆ.

ನಾಳೆಯ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ ಹೆಚ್ ಕೆ,ಶಿವಮೊಗ್ಗ ವಿಭಾಗ ಸಂಚಾಲಕ ರವಿ ಇರೋಜಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿಆದಿತ್ಯ ಶೆಟ್ಟಿ ಉಪಸ್ಥಿತರಿರುವರೆಂದು ಎಬಿವಿಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.














Leave a Reply