ರಸ್ತೆ ಅಪಘಾತ ,ಬೀಡಾಡಿ ಗೋವು ಸಾವು: ಹಿಂದೂ ಕಾರ್ಯಕರ್ತ ರಿಂದ ಅಂತ್ಯ ಸಂಸ್ಕಾರ

IMG 20251216 WA0127 1 ರಸ್ತೆ ಅಪಘಾತ ,ಬೀಡಾಡಿ ಗೋವು ಸಾವು: ಹಿಂದೂ ಕಾರ್ಯಕರ್ತ ರಿಂದ ಅಂತ್ಯ ಸಂಸ್ಕಾರ
Spread the love

ರಿಪ್ಪನ್ ಪೇಟೆ: ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಒಂದು ಮೃತ ಗೋವು ಪತ್ತೆಯಾಗಿದೆ. ರಸ್ತೆ ಬದಿಯಲ್ಲಿ ಮಲಗಿರುವ ವೇಳೆಯಲ್ಲಿ ಒಂದು ವಾಹನ ಗೋವಿನ ತಲೆಯ ಮೇಲೆ ಹತ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಗೋವು ಸ್ಥಳದಲ್ಲೆ  ಸಾವಿಗೀಡಾಗಿದೆ.

ನಾಡಿ ನ್ಯೂಸ್ 20251217 150518 00006589753032075911378 ರಸ್ತೆ ಅಪಘಾತ ,ಬೀಡಾಡಿ ಗೋವು ಸಾವು: ಹಿಂದೂ ಕಾರ್ಯಕರ್ತ ರಿಂದ ಅಂತ್ಯ ಸಂಸ್ಕಾರ

ವಾಹನದ ಮಾಲೀಕರು ಆ ಮೃತ ಗೋವಿನ ದೇಹವನ್ನು ದೂನ ಗ್ರಾಮದ ರಸ್ತೆ ಬದಿಯಲ್ಲಿ ಎಸೆದು ಹೋಗಿರುತ್ತಾರೆ ಎಂದು ಹೇಳಲಾಗುತ್ತಿದೆ. ಅಲ್ಲೆ ಇದ್ದ ನಾಯಿಗಳು ಮೃತ ಗೋವಿನ ದೇಹದ ಭಾಗಗಳನ್ನ ಕಿತ್ತು ತಿನ್ನುವ ದೃಶ್ಯವು ಪ್ರತಿಯೊಬ್ಬ ಗೋಪ್ರೇಮಿಯ ಹೃದಯ ಕಲಕುವಂತಿತ್ತು.

ಮಾಹಿತಿ ಸಿಕ್ಕ ತಕ್ಷಣ ಹಿಂದೂ ಪರ ಸಂಘಟನೆಯ ಕಾರ್ಯಕರ್ತರಾದ ಕುಷನ್ ದೇವರಾಜ್,ಮಂಜು ಆಚಾರ್,ರಾಘು,ಸಂಜಯ್,ದೂನ ಕುಮಾರಣ್ಣ ಸ್ಥಳಕ್ಕೆ ಧಾವಿಸಿ ಮೃತ ಗೋವಿನ ದೇಹವನ್ನು ಸುರಕ್ಷಿತವಾದ ಸ್ಥಳದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.


Spread the love

Leave a Reply

Your email address will not be published. Required fields are marked *