ರಿಪ್ಪನ್‌ಪೇಟೆ:ಕೆರೆಹಳ್ಳಿ ಗ್ರಾಮದಲ್ಲಿ ವಿದ್ಯುತ್ ಶರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಹುಲ್ಲಿನ ಬಣವೆ ಬೆಂಕಿ ಬಿದ್ದು ಸೋಮವಾರ ಸಂಪೂರ್ಣ ಭಸ್ಮವಾಗಿದೆ .
ಪ್ರೇಮಮ್ಮ ಸುಮಾರು ಎರಡು ಎಕ್ರೆ ಬತ್ತದ ಫಸಲನ್ನು ಒಕ್ಕಲು ಮಾಡಿದ ಹುಲ್ಲುನ ಬಣವೆಗೆ ಅಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಬಸ್ಮವಾಗಿದೆ. ಜಮೀನಿನಲ್ಲಿದ್ದ ವಿದ್ಯುತ್ ಪರಿವರ್ತಕದ ಕಂಬದಿಂದ ಬೆಂಕಿ ಕಿಡಿ ಕೆಳಗೆ ಬಿದ್ದು ಒಕ್ಕಲು ಮಾಡಿ ಶೇಖರಿಸಿಟ್ಟಿದ್ದ ಒಣಗಿದ ಹುಲ್ಲಿಗೆ ತಗುಲಿದೆ.
ತಕ್ಷಣವೇ ಗ್ರಾಮಸ್ಥರು, ಪೋಲಿಸ್, ಕಂದಾಯ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಾರ್ಯಪ್ರವೃತರಾಗಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಅಗ್ನಿ ಕ್ಷಾಮಕ ದಳದ ಸಿಬ್ಬಂದಿ ಬೆಂಕಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾದರು.















Leave a Reply