ಪಟ್ಟಣದ ಸಾವರ್ಕರ್ ರಸ್ತೆಯ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿದ ಶಾಸಕ ಬೇಳೂರು.

IMG 20251206 WA0002 2 ಪಟ್ಟಣದ ಸಾವರ್ಕರ್ ರಸ್ತೆಯ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿದ ಶಾಸಕ ಬೇಳೂರು.
Spread the love


ರಿಪ್ಪನ್ ಪೇಟೆ : ಪಟ್ಟಣದ ಸಾವರ್ಕರ್ ರಸ್ತೆಯ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿದ ಶಾಸಕ ಬೇಳೂರು.

ವಿವಿಧ ಗ್ರಾಮಗಳಲ್ಲಿ ಶಂಕುಸ್ಥಾಪನೆಯ ನಂತರ ಡಿ.ಸಿ.ಸಿ ಬ್ಯಾಂಕ್ ನ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತಾನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ
ಹೊಸನಗರ ತಾಲೂಕಿನ ಅಭಿವೃದ್ಧಿಗಾಗಿ ಬದ್ಧನಾಗಿದ್ದೇನೆ. ರಿಪ್ಪನ್ ಪೇಟೆಯ ಅನೇಕ ರಸ್ತೆಗಳ ಕಾಮಗಾರಿಗೆ ನಾನು ಹಣ ಬಿಡುಗಡೆಗೊಳಿಸಿದ್ದೆನೆ‌. ರಿಪ್ಪನ್ ಪೇಟೆಯನ್ನ ಪಟ್ಟಣ ಪಂಚಾಯತ್ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೆನೆ‌. ರಿಪ್ಪನ್ ಪೇಟೆಯ ಅಭಿವೃದ್ಧಿಗೆ ನಾವು ಶ್ರಮವಹಿಸುತ್ತೆವೆ ಎಂದರು.

ನಂತರ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಧನಲಕ್ಷ್ಮೀ ಊರಿನ ಅಭಿವೃದ್ಧಿಗೆ ಶಾಸಕರ ಶ್ರಮ ನೋಡಿದರೆ ನಮಗೆ ಹೆಮ್ಮೆಯಾಗುತ್ತದೆ‌. ಇಂತಹ ಶಾಸಕರನ್ನು ಪಡೆದ ನಾವೇ ಧನ್ಯರು ಎಂದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಮಾತನಾಡಿ ಸಾವರ್ಕರ್ ರಸ್ತೆಯ ಅಭಿವೃದ್ಧಿ ಅವಶ್ಯಕತೆ ಇತ್ತು ಈ ಕೊರತೆಯನ್ನು ನಮ್ಮ ನೆಚ್ಚಿನ ಶಾಸಕರು ನೀಗಿಸಿದ್ದಾರೆ. ಶಾಸಕರು ಸಚಿವರಾಗಬೇಕು ಅದರಿಂದಾಗಿ ನಮ್ಮೂರಿನ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಧನಲಕ್ಷ್ಮೀ , ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಮಾಜಿ ತಾ.ಪಂ ಸದಸ್ಯ ಎನ್ .ಚಂದ್ರೇಶ್,ಗ್ರಾ.ಪಂ ಸದಸ್ಯ ಗಣಪತಿ, ಪ್ರಕಾಶ್ ಪಾಲೇಕರ್ ,ಮಧುಸೂಧನ್, ಮಹಾಲಕ್ಷ್ಮಿ ಅಣ್ಣಪ್ಪ, ಎಂ.ಎಂ.ಪರಮೇಶ್ ,ಉಮಾಕರ್,ಸುಳುಕೋಡು ಪ್ರವೀಣ್ ,ಶಾಸಕರ ಆಪ್ತ ರವೀಂದ್ರ ಕೆರೆಹಳ್ಳಿ, ಶ್ರೀನಿವಾಸ ಆಚಾರ್, ಶ್ರೀಧರ್, ವಿಜಯ್ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರಿದ್ದರು.


Spread the love

Leave a Reply

Your email address will not be published. Required fields are marked *