ಸಮಾಜಕ್ಕೆ ಕೊಡುಗೆ ನೀಡಿದವರನ್ನು ಗುರುತಿಸುವುದೇ ರೋಟರಿಯ ಧ್ಯೇಯ: ಅಧ್ಯಕ್ಷ ರವೀಂದ್ರ ಬಲ್ಲಾಳ್
ರಿಪ್ಪನ್ ಪೇಟೆ: ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ರಿಪ್ಪನ್ ಪೇಟೆ ಶಾಖೆ ವತಿಯಿಂದ ನ್ಯಾಷನಲ್ ಬಿಲ್ಡರ್ ಅವಾರ್ಡ್(Nation builder award )ಪ್ರದಾನ ಸಮಾರಂಭವನ್ನು ಆಯೋಜಿಸಿ, ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಐವರು ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು.

ನೇಷನ್ ಬಿಲ್ಡರ್ ಅವಾರ್ಡ್ ಸನ್ಮಾನಿತರು : ಜನಾರ್ಧನ್ ನಾಯ್ಕ್, ಚಂದ್ರಪ್ಪ ಕೆ., ಸುಧಾ ಹೆಗಡೆ, ಸುಲೇಖ ಕೆ. ಹಾಗೂ ಉಷಾರಾಣಿ ಅವರಿಗೆ ನ್ಯಾಷನಲ್ ಬಿಲ್ಡರ್ ಅವಾರ್ಡ್ ನೀಡಿ ಗೌರವಿಸಲಾಯಿತು. ಸನ್ಮಾನಿತ ಶಿಕ್ಷಕರು ತಮ್ಮ ವೃತ್ತಿ ಜೀವನದ ಅನುಭವಗಳು ಹಾಗೂ ಶಿಕ್ಷಣ ಸೇವೆಯ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ಶಿಕ್ಷಕರು ದೇಶಕ್ಕೆ ಉತ್ತಮ ನಾಗರಿಕರನ್ನು ನೀಡುತ್ತಿದ್ದಾರೆ. ಸಮಾಜಕ್ಕೆ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ರೋಟರಿಯ ಪ್ರಮುಖ ಕರ್ತವ್ಯವಾಗಿದ್ದು, ಈ ಕಾರ್ಯಕ್ರಮದ ಆಯೋಜನೆಯಲ್ಲಿ ಕ್ಲಬ್ ಸದಸ್ಯ ರಾಧಾಕೃಷ್ಣ ಮಾಸ್ಟರ್ ಅವರ ಕೊಡುಗೆ ವಿಶೇಷವಾಗಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಹೆಚ್.ಎ. ರಾಧಾಕೃಷ್ಣ ಮಾತನಾಡಿ, ಅಜ್ಞಾನದಿಂದ ಜ್ಞಾನದೆಡೆಗಿನ ಪಯಣದಲ್ಲಿ ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಸ್ಥಾನ ಶ್ರೇಷ್ಠವಾಗಿದೆ. ಶಿಕ್ಷಕರ ಸಾಧನೆಯನ್ನು ಗುರುತಿಸುವ ಉದ್ದೇಶದಿಂದಲೇ ರೋಟರಿ ಕ್ಲಬ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣಗೌಡ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಬ್ಬಾರ್, ಜೆ. ರಾಧಾಕೃಷ್ಣ, ಗಣೇಶ್ ಆರ್., ಕೃಷ್ಣರಾಜು ಎ.ಎಂ., ಎಂ.ಬಿ. ಮಂಜುನಾಥ್, ತಾನಾರಾಮ್ ಪಟೇಲ್, ಸುಧೀಂದ್ರ ಹೆಬ್ಬಾರ್, ರಾಮಚಂದ್ರ ಎಂ., ಸದಾನಂದ ಜೆ.ಜೆ., ಶಿವಕುಮಾರ್ ಶೆಟ್ಟಿ, ಸವಿತಾ ರಾಧಾಕೃಷ್ಣ, ಅಮಿತಾ ಬಲ್ಲಾಳ್, ಪ್ರಮೀಳಾ ಗೌಡ, ದೀಪಾ ಗಣೇಶ್, ಅಮೃತಾ ಹೆಬ್ಬಾರ್, ದೀಪಾ ಸುಧೀಂದ್ರ ಹೆಬ್ಬಾರ್, ಮುಖೇಶ್, ಡಾಕಪ್ಪ, ಹುಗುಡಿ ವರ್ತೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಗಾಯಕ ಕೃಷ್ಣರಾಜು ಎ.ಎಂ. ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
















Leave a Reply