ರಿಪ್ಪನ್‌ಪೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ | ಸಿದ್ದಿವಿನಾಯಕನಿಗೆ ವಿಶೇಷ ಪೂಜೆ

Addaheading 20260917 192902 0000 ರಿಪ್ಪನ್‌ಪೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ | ಸಿದ್ದಿವಿನಾಯಕನಿಗೆ ವಿಶೇಷ ಪೂಜೆ
Spread the love

ರಿಪ್ಪನ್‌ಪೇಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 77ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಕುಂಕುಮಾರ್ಚನೆ ಸೇವೆಯನ್ನು ಸಲ್ಲಿಸಲಾಯಿತು.

   ಬಿಜೆಪಿಯ ಕೆರೆಹಳ್ಳಿ ಹೋಬಳಿ ಮಹಾಶಕ್ತಿ ಕೇಂದ್ರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಶ್ರೀ ಸಿದ್ದಿವಿನಾಯಕ ಸ್ವಾಮಿಗೆ ವಿಶೇಷ ಪೂಜೆ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳನ್ನು ಸಮರ್ಪಿಸಿ, ದೇಶದ ಅಭಿವೃದ್ಧಿ ಹಾಗೂ ಜನಸೇವೆಯ ಸಂಕಲ್ಪ ಮಾಡಲಾಯಿತು.

  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ  ದೇಶದ ಅಭಿವೃದ್ಧಿ, ಜನಕಲ್ಯಾಣ ಹಾಗೂ ಸೇವಾ ಕಾರ್ಯಗಳಿಗೆ ಮತ್ತಷ್ಟು ಬಲ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.

   ಈ ಸಂದರ್ಭದಲ್ಲಿ ಬಿಜೆಪಿ ಕೆರೆಹಳ್ಳಿ ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಂದ್ರೇಶ್ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಮಂಜುಳ ಕೇತಾರ್ಜಿ, ಪದ್ಮಾ ಸುರೇಶ್, ಕುಷನ್ ದೇವರಾಜ್, ಆರ್. ರಾಘವೇಂದ್ರ, ಸಿದ್ಧೇಶ್ ಭಂಡಾರಿ, ಮಂಜುನಾಥ್,ಕಗ್ಗಲಿ ಲಿಂಗಪ್ಪ, ಹೂವಪ್ಪ, ಸುಧೀರ್ ಪಿ.,ಸುರೇಶ್,ರೇಖಾರವಿ, ರಾಮಚಂದ್ರ ಸೇರಿದಂತೆ ಅನೇಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

img 20260917 wa00545792931269531072034 ರಿಪ್ಪನ್‌ಪೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ | ಸಿದ್ದಿವಿನಾಯಕನಿಗೆ ವಿಶೇಷ ಪೂಜೆ
ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿ ಬಳಗದ ವತಿಯಿಂದ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಪಟ್ಟಣದ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
file 000000003f5c8208a0b120fec3430d9d8633946293645103701 ರಿಪ್ಪನ್‌ಪೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ | ಸಿದ್ದಿವಿನಾಯಕನಿಗೆ ವಿಶೇಷ ಪೂಜೆ

Leave a Reply

Your email address will not be published. Required fields are marked *

error: Content is protected !!