Accident : ಹೊಸನಗರ ಸಮೀಪ ಬ್ರಹ್ಮೇಶ್ವರದಲ್ಲಿ ಬೈಕ್ ಅಪಘಾತ: 31 ವರ್ಷದ ಯುವಕ ಸಾ*ವು

NAADI NEWS 20260303 132909 0000 Accident : ಹೊಸನಗರ ಸಮೀಪ ಬ್ರಹ್ಮೇಶ್ವರದಲ್ಲಿ ಬೈಕ್ ಅಪಘಾತ: 31 ವರ್ಷದ ಯುವಕ ಸಾ*ವು
Spread the love

ಮೃತರನ್ನು ಜೇನಿ ಗ್ರಾಮ ಪಂಚಾಯತ್ ನವರು ಎಂದು ಗುರುತಿಸಲಾಗಿದೆ..

ಹೊಸನಗರ: ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸವಾರನೊಬ್ಬರು ಸಾವನ್ನಪ್ಪಿದ ದುರ್ಘಟನೆ ತಾಲೂಕಿನ ಬ್ರಹ್ಮೇಶ್ವರದ ಬಳಿ ನಡೆದಿದೆ.

ಮೃತರನ್ನು ಹೊಸನಗರ ಸಮೀಪದ ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿಡಿಯಾಪುರ ಗ್ರಾಮದ ವಸಂತ್ (31) ಎಂದು ಗುರುತಿಸಲಾಗಿದೆ. ಅವರು ಬ್ರಹ್ಮೇಶ್ವರ ಮಾರ್ಗವಾಗಿ ಸಿಡಿಯಾಪುರದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದ ಪರಿಣಾಮ ಗಂಭೀರವಾಗಿ ಗಾಯಗೊಂಡ ವಸಂತ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಹೊಸನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *