ನಾಳೆ ಮಾದಾಪುರದಲ್ಲಿ 2ನೇ ವರ್ಷದ ಹೋರಿ ಬೆದರಿಸುವ ಹಬ್ಬ

NAADI NEWS 20260128 192436 0000 ನಾಳೆ ಮಾದಾಪುರದಲ್ಲಿ 2ನೇ ವರ್ಷದ ಹೋರಿ ಬೆದರಿಸುವ ಹಬ್ಬ
Spread the love

ರಿಪ್ಪನ್ ಪೇಟೆ : ಹೊಡಿ ಹಲಗಿ… ಹಿಡಿ ಹೋರಿ…ಹರಿ ಕೊಬ್ಬರಿ…ಎಂಬ ಶೀರ್ಷಿಕೆಯ ಅಡಿಯಲ್ಲಿ ಮಾದಾಪುರದಲ್ಲಿ ಭಾರಿ ಹೋರಿ ಬೆದರಿಸುವ ಹಬ್ಬ ಏರ್ಪಡಿಸಲಾಗಿದೆ.

ಶ್ರೀ ಶನಿಪರಮೇಶ್ವರ ಹೋರಿ ಹಬ್ಬ ಕಮಿಟಿ ಮತ್ತು ಗ್ರಾಮಸ್ಥರು ಮಾದಾಪುರ ಇವರಿಂದ ದ್ವಿತೀಯ ಬಾರಿಗೆ ಗಂಗಾಮತದ ಹುಲಿ ಸವಿನೆನಪಿಗಾಗಿ  ‘ ಭಾರಿ ಹೋರಿ ಬೆದರಿಸುವ ಹಬ್ಬ ‘ ಏರ್ಪಡಿಸಲಾಗಿದ್ದು ನಾಳೆ (29) ಗುರುವಾರದಂದು ಬೆಳಗ್ಗೆ 8:00 ಯಿಂದ ಸಂಜೆಯ 5:00 ಗಂಟೆ ತನಕ ಹೋರಿ ಬೆದರಿಸುವ ಕಾರ್ಯಕ್ರಮ ನಡೆಯಲಿದ್ದು.

ಹೋರಿ ಹಿಡಿದ ಪೈಲ್ವಾನರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುತ್ತಿದೆ.

img 20260128 wa00402494078968932783324 ನಾಳೆ ಮಾದಾಪುರದಲ್ಲಿ 2ನೇ ವರ್ಷದ ಹೋರಿ ಬೆದರಿಸುವ ಹಬ್ಬ



ಪ್ರಥಮ 12000, ದ್ವಿತೀಯ 8000, ತೃತಿಯ 5000 ಜೊತೆಯಲ್ಲಿ ಅನೇಕ ಆಕರ್ಷಕ ಉಡುಗೊರೆಯನ್ನು ಕಮಿಟಿಯ ವತಿಯಿಂದ  ನೀಡಲಾಗುತ್ತಿದೆ.

ಶ್ರೀ ಶನಿಪರಮೇಶ್ವರ ಹೋರಿ ಹಬ್ಬದ ಕಮಿಟಿ ಮತ್ತು ಗ್ರಾಮಸ್ಥರು  ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೈಲ್ವಾನರು ಮತ್ತು ಸಾರ್ವಜನಿಕರು ಭಾಗವಹಿಸಬೇಕೆಂದು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
7676113420,7899223867,8762341463,8971490252,


Spread the love

Leave a Reply

Your email address will not be published. Required fields are marked *