ಹೊಸನಗರದಲ್ಲಿ ಜನವರಿ 20 ರಿಂದ 28ರ ವರೆಗೆ ಅದ್ಧೂರಿ ಮಾರಿ ಜಾತ್ರೆ

NAADI NEWS 20260118 163819 0000 ಹೊಸನಗರದಲ್ಲಿ ಜನವರಿ 20 ರಿಂದ 28ರ ವರೆಗೆ ಅದ್ಧೂರಿ ಮಾರಿ ಜಾತ್ರೆ
Spread the love

ಹೊಸನಗರ: ಹೊಸನಗರದ ಮಾರಿಗುಡ್ಡದಲ್ಲಿರುವ  ಶ್ರೀಕ್ಷೇತ್ರ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಜನವರಿ 20 ರಿಂದ 28ರವರೆವಿಗೆ ಅದ್ಧೂರಿ ಮಾರಿಜಾತ್ರೆ ನಡೆಯಲಿದೆ ಎಂದು ಮಾರಿಕಾಂಬಾ ದೇವಿ ಜಾತ್ರಾ ಸಮಿತಿಯ ಅಧ್ಯಕ್ಷರಾದ ಹೆಚ್. ಎಲ್ ದತ್ತಾತ್ರೇಯರವರು  ತಿಳಿಸಿದ್ದಾರೆ.ಹೊಸನಗರದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಸುದ್ಧಿ ಗೋಷ್ಠಿ ನಡೆಸಿ ಅವರು ಮಾತನಾಡಿದರು.

img 20260110 wa00005608541963626845268 ಹೊಸನಗರದಲ್ಲಿ ಜನವರಿ 20 ರಿಂದ 28ರ ವರೆಗೆ ಅದ್ಧೂರಿ ಮಾರಿ ಜಾತ್ರೆ


  ದಿನಾಂಕ ೨೦ನೇ ಮಂಗಳವಾರ ಮಾರಿಕಾಂಬ ತಾಯಿಯ ತಾಯಿಮನೆಯಾದ  ಹಳೇ ಸಾಗರ ರಸ್ತೆಯಲ್ಲಿರುವ ದುರ್ಗಾ೦ಭ ದೇವಸ್ಥಾನದ ಆವರಣದಲ್ಲಿ ಜಾತ್ರೆ ಪ್ರಾರಂಭವಾಗಲಿದ್ದು ಜನವರಿ ೨೧ರಿಂದ ೨೮ರವರೆವಿಗೆ  ಹೊಸನಗರದ ಮಾರಿಗುಡ್ಡದಲ್ಲಿರುವ ಮಾರಿಯಮ್ಮನ ಗಂಡನ ಮನೆಯೆಂದು ಖ್ಯಾತಿ ಪಡೆದಿರುವ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಬುಧವಾರದಿಂದ ಜಾತ್ರೆ ಆರಂಭವಾಗಲಿದೆ ಎಂದು ತಿಳಿಸಿದರು.ಸಭಾ ಕಾರ್ಯಕ್ರಮ ಮತ್ತು ಮನರಂಜನೆ ಕಾರ್ಯಕ್ರಮಗಳು ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿದಿನ ರಾತ್ರಿ ೮ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು ಸಂಜೆ ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆಯಲಿದೆ ಎಂದು ದಿನಾಂಕ: ೨೨-೦೧-೨೦೨೬ನೇ ಗುರುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಈ ಕಾರ್ಯಕ್ರಮವನ್ನು ಉದ್ಗಾಟಿಸಲಿದ್ದಾರೆ ಈ ಸಮಾರಂಭದ ಅಧ್ಯಕ್ಷತೆಯನ್ನು ದತ್ತಾತ್ರೇಯರವರು ವಹಿಸಲಿದ್ದು ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ,ಆರ್.ಎಂ. ಮಂಜುನಾಥ ಗೌಡ, ಕಲಗೋಡು ರತ್ನಾಕರ್, ನಗರ ಮಹಾದೇವಪ್ಪ ಆಗಮಿಸಲಿದ್ದು ಪದ್ಮ ಅನಾಥಶ್ರಮದ ವ್ಯವಸ್ತಾಪಕ ಪ್ರಬಾಕರ್ ಹಾಗೂ ಗಿನ್ನಿಸ್ ವಲ್ಡ್ ರೆಕಾರ್ಡ್ ಕವನಶ್ರೀ, ಯೋಧ ಸ್ಮರಣೆ ಶ್ರೀ ಮಂಜುನಾಥ್ ಜೆ. ಸಂಕೂರು ಅವರಿಗೆ ಸನ್ಮಾನಿಸಲಿದ್ದಾರೆ. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತೀಕ ಕಾರ್ಯಕ್ರಮ ನಡೆಯಲಿದೆ ಎಂದರು.



ಸಂಗೀತ ಸಂಜೆ ಜನವರಿ೨೩ನೇ ಶುಕ್ರವಾರ ಭದ್ರಾವತಿ ಸೋನಿ ಮೆಲೋಡಿ ತಂಡದವರಿಂದ ಆರ್ಕೆಸ್ಟ್ರಾ, ಜನವರಿ ೨೪ನೇ ಶನಿವಾರ ಭದ್ರಾವತಿ ಬೀಟ್ಸ್ ಆರ್ಕೆಸ್ಟ್ರಾ,೨೫ನೇ ಭಾನುವಾರ ಸಂಜೆ ೭ಗಂಟೆಗೆ ಮನು ಹಂದಾಡಿಯವರಿ೦ದ ನಾಟಕ ೨೬ನೇ ಸೋಮವಾರ ಸಂಜೆ ಎಂ ತಾಜ್‌ಕೊಪ್ಪ ಇವರಿಂದ ಮ್ಯೂಸಿಕ್ ಆರ್ಕೆಸ್ಟ್ರಾ, ೨೭ ನೇ ಮಂಗಳವಾರ ಝೇಂಕಾರ್ ಮೆಲೋಡಿ ಭಟ್ಕಳ  ಮ್ಯೂಸಿಕ್ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ ಎಂದರು. ವಿವಿಧ ಆಟೋಟಗಳು ಈ ಬಾರೀ ಮಕ್ಕಳಿಗಾಗಿ ರ‍್ಯಾಂಬೋ ಅಮ್ಯೂಸ್‌ನವರಿಂದ ರೋಮಾಂಚಕಾರಿ ಮೈ ಜುಂ ಎನ್ನುವ ಜಾಯಿಂಟ್‌ವೀಲ್, ಕೋಲಂಬಸ್, ಬ್ರೇಕ್ ಡ್ಯಾಸ್ಸ್, ಮಾರುತಿ ಡೂಮ್, ಮಕ್ಕಳ ರೈಲು ಮ್ಯಾಜಕ್ ಷೋ ಡಾಗ್ ಷೋ ಹಾಗೂ ಇನ್ನೂ ಹತ್ತು ಹಲವಾರು ರೀತಿಯ ವಿಶೇಷ ಮನೋರಂಜನೆಗಳು ಇರುತ್ತದೆ ಎಂದು ತಿಳಿಸಿದ್ದು ಹೊಸನಗರ ತಾಲ್ಲೂಕಿನ ಸಾರ್ವಜನಿಕರು ಹಾಗೂ ತಾಯಿಯ ಭಕ್ತಾರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.

img 20260116 wa00013294245375563388065 ಹೊಸನಗರದಲ್ಲಿ ಜನವರಿ 20 ರಿಂದ 28ರ ವರೆಗೆ ಅದ್ಧೂರಿ ಮಾರಿ ಜಾತ್ರೆ


  ಪತ್ರಿಕಾ ಘೋಷ್ಠಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತ್ತು.ಪತ್ರಿಕಾ ಘೋಷ್ಠಿ ಹಾಗೂ ಕರಪತ್ರ ಬಿಡುಗಡೆಯ ಸಂದರ್ಭದಲ್ಲಿ ಶ್ರೀಕ್ಷೇತ್ರ ಮಾರಿಕಾಂಭ ಜಾತ್ರ ಕಮಿಟಿಯ ಕಾರ್ಯದರ್ಶಿ ಟಿ.ಆರ್ ಸುನೀಲ್ ಕುಮಾರ್, ಖಾಜಾಂಚಿ ಪಿ.ಮನೋಹರ್, ದೇವಸ್ಥಾನದ ಮುಖ್ಯಸ್ಥರಾದ ನಾಗರಾಜ್, ವೀರಾಂಜನೆಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಹೇಶ್, ಸದಸ್ಯರಾದ ಹೆಚ್.ಎಲ್ ಅನಿಲ್ ಕುಮಾರ್, ಗಿರೀಶ ಹೆಚ್.ಎಸ್, ಮಹಾಬಲ, ಸತ್ಯನಾರಾಯಣ, ಹೆಚ್.ಎಂ. ನಿತ್ಯನಂದ, ಕುಮಾರ ಗೌಡ, ಮಲ್ಲಿಕಾರ್ಜುನ, ಶೀತಾಲ್ ಶ್ರೀನಿವಾಸ್, ಹಾಡಿಮನೆ ಗೋಪಾಲ್, ವಿಶು,  ಇನ್ನೂ ಮುಂತಾದವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *